ಹಾವೇರಿ: ಐಸಿಡಿಎಸ್ ಹಾಗೂ ಬಿಸಿಯೂಟದಲ್ಲಿ ನಿಮಗಳ ನಿರಂತರ ಎರಡ್ಮೂರು ದಶಕಗಳ ಸೇವೆ ವ್ಯರ್ಥವಾಗಲ್ಲ.ಬರುವಂತ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿಮಗೆ ಸೂಕ್ತವಾದ ಸ್ಥಾನ,ಮಾನ,ಗೌರವ ಮತ್ತು ಸಂಬಳವನ್ನು ನೀಡಲೇಬೇಕಾಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ನಡೆದ ಎಐಟಿಯುಸಿ ಸಂಯೋಜಿತ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಗೌರವಧಕ್ಕೆ ದುಡಿಯುವ ಅಂಗನವಾಡಿ, ಬಿಸಿಯೂಟ,ಸಂಜೀವಿನಿ ಒಕ್ಕೂಟದಲ್ಲಿ ಗ್ರಾಮ ಪಂಚಾಯತಿ ದುಡಿಯುವ ನೌಕರರ ಸಮಾವೇಶದಲ್ಲಿ ಅವರು ಮಾತನಾಡಿದರು.
ನಿಮ್ಮ ಧ್ವನಿಯಾಗಿ ಜಿಲ್ಲೆಯಲ್ಲಿ ಒಬ್ಬ ಸಂಸದನಾಗಿ ನಾನು ಇರುತ್ತೇನೆ ಎಂದು ಅಭಿಮಾನದಿಂದ ಹೇಳುತ್ತೇನೆ.ಐಸಿಡಿಎಸ್, ಬಿಸಿಯೂಟದ ಕಾರ್ಯಕ್ರಮದಲ್ಲಿ ಏರುಪೇರಗಳಲ್ಲಿ ಮಹತ್ತರವಾದ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ.ಕೇಂದ್ರ ಸರಕಾರ ಐಸಿಡಿಎಸ್ ಕಾರ್ಯಕ್ರಮವನ್ನು ಪುನರ್ ವಿಮರ್ಶೆ ಮಾಡಬೇಕು. ಅದಕ್ಕೆ ಆಡಳಿತಾತ್ಮಕ ದೊಡ್ಡ ಬದಲಾವಣೆ ಬೇಕಾಗುತ್ತದೆ ಅದಕ್ಕೆ ಪ್ರಯತ್ನ ಮಾಡುವೆ. ಇನ್ನು ಸಂಜೀವಿನಿ ಯೋಜನೆಯಲ್ಲಿ ಜಿಲ್ಲೆಗೆ 54 ಕೋಟಿ ನೀಡಿದ್ದೇನೆ. ಅದು ಇನ್ನೂ ಹೆಚ್ಚಿಗೆ ಆಗಬೇಕು ಎಂದರು.
ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ನಮ್ಮ ಸರಕಾರ ಬಂದರೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆ ಎಂದಿದ್ವಿ. ಅವುಗಳನ್ನು ಜಾರಿಗೆ ತಂದಿದ್ದೇವೆ. ಆದರೆ,ಲೋಕಸಭಾ ಚುನಾವಣೆಯಲ್ಲಿ ನಮಗೆ ವೋಟ್ ಹಾಕಿದ್ದರೇ ಮಹಾಲಕ್ಷ್ಮೀ ಬರುತ್ತಿತ್ತು. ನೀವು ನಮಗೆ ಕಡಿಮೆ ವೋಟ್ ಹಾಕಿದ್ದಕ್ಕೆ ಅದನ್ನು ಕಳೆದುಕೊಂಡಿರೀ.ಆದ್ದರಿಂದ ಇಲ್ಲಿನ ಸಂಸದರಿಗೆ ನೀವು ಹೇಳಬೇಕು ಒಂದು ಲಕ್ಷ ಕಳೆದುಕೊಂಡ ನಿಮ್ಮನ ಆಯ್ಕೆ ಮಾಡಿದೇವಿ. ಕೇಂದ್ರದಿಂದ ಬರಬೇಕಾದ ಎಲ್ಲ ಸೌಲಭ್ಯ ಕೊಡಿಸಿ ಎಂದು ಕೇಳಿ ಎಂದರು.ಕಾರ್ಮಿಕ ಸಂಘಟನೆಯ ಮೂಲಕ ಹೋರಾಟ ಮಾಡಿ ಕೆಲವು ಸೌಲಭ್ಯ ಪಡೆದುಕೊಂಡಿದ್ದಿರೀ. ಇನ್ನಷ್ಟು ನಿಮ್ಮ ಬೇಡಿಕೆಗಳ ಈಡೇರಿಸುವ ಅಗತ್ಯವಿದೆ. ನಮ್ಮ ಸರಕಾರ ಇನ್ನೂ ನಾಲ್ಕು ವರ್ಷ ಇರುತ್ತದೆ. ಆ ವೇಳೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಿಮಗೆ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುವೆ ಎಂದರು.
ದೇವಾಲಯದೊಳಗೆ ಬಂದ ಭಾವನೆ ಬಂದಿತು:
ಬಾಕ್ಸ್ ಮಾಡಿ:
ಈ ಕಾರ್ಯಕ್ರಮಕ್ಕೆ ಬರುವಾಗ ನನಗೆ ದೇವಾಲಯದೊಳಗೆ ಬರುತ್ತಿದ್ದೇನೆ ಎಂಬಂತೆ ಅನಿಸಿತು. ಇಲ್ಲಿರುವ ತಾಯಂದಿರನ್ನು ಮೆಚ್ಚಿಸಲು ಈ ಮಾತು ಹೇಳುತ್ತಿಲ್ಲ. ಮನಸ್ಸಿನಿಂದ ಈ ಮಾತು ಹೇಳುತ್ತಿರುವೆ. ಈ ಜಗತ್ತಿನಲ್ಲಿ ತಾಯಿ ಸಂಬಂಧ ಶ್ರೇಷ್ಠ, ತಾಯಿಯನ್ನು ಮೀರಿಸುವ ಮತ್ತೊಂದು ಸಂಬಂಧ ಈ ಜಗದಲ್ಲಿ ಇಲ್ಲ. ಅಂತಹ ತಾಯಿಯ ಕೆಲಸವನ್ನು ನೀವು ಮಾಡುತ್ತಿದ್ದರೀ.ಬೇರೆಯವರ ಮಕ್ಕಳನ್ನು ಲಾಲನೆ,ಪಾಲನೆ ಘೋಷಣೆಯನ್ನು ನೀವು ಮಾಡುತ್ತಿರೀ. ನಿಮ್ಮ ಹೃದಯ ವೈಶಾಲ್ಯತೆ ಎಂತದ್ದಿರಬಹು ಎಂದು ಅಂಗನವಾಡಿ,ಬಿಸಿಯೂಟ ತಯಾರಕರ ಕಾರ್ಯವನ್ನು ಶ್ಲಾಘಿಸಿದರು.ಬಾಲ್ಯದಲ್ಲಿ ತಾಯಂದಿರು ಮಕ್ಕಳನ್ನು ತಮ್ಮ ಬಳಿ ಬಿಟ್ಟು ಹೋಗತಾರೆ, ನೀವು ನೂರಾರು ಮಕ್ಕಳಿಗೆ ತಾಯಂದಿರಾಗಿ ಅವರು ಭವಿಷ್ಯವನ್ನು ಬರೆಯುತ್ತೀರಿ. ನೀವು ಬರೆಯುವ ಭವಿಷ್ಯ ದೇಶದ ಅಭಿವೃದ್ಧಿ ಪೂರಕವಾಗಿದೆ. ಆದ್ದರಿಂದ ನೀವು ಬಾಲ್ಯದಲ್ಲಿ ಯಾವ ಭೋದನೆಯನ್ನು ಬರೆಯುತ್ತಿರೀ ಅಂತಹ ಒಂದು ಸಮಾಜ ನಿರ್ಮಾಣ ಆಗುತ್ತದೆ. ಅದೇ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ನಿಮಗಳ ಸಿನಿಯಾರಿಟಿ ನೋಡಿ ನಿಮಗೆ ಗೌರವಧನ ಹೆಚ್ಚಿಸವ ಕೆಲಸವನ್ನು ನಾನು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಎಫ್ ಎನ್ ಗಾಜೀಗೌಡರ,ಬಿಸಿಯೂಟ ತಯಾರಕರ ರಾಜ್ಯ ಕಾರ್ಯದರ್ಶಿ ಆವರಗೇರೆ ಚಂದ್ರು ಜಿಲ್ಲಾಧ್ಯಕ್ಷ ಜಿ.ಡಿ.ಪೂಜಾರ ಸೇರಿದಂತೆ ಅಂಗನವಾಡಿ,ಬಿಸಿಯೂಟ, ಸಂಜೀವಿನಿ ಒಕ್ಕೂಟದ ಗೌರವಧನ ಕಾರ್ಮಿಕರು ಹಾಜರಿದ್ದರು.