ಖಾಸಗಿ ಏಜನ್ಸಿಗಳಿಂದ ಆರೋಗ್ಯ ಇಲಾಖೆಯ ಹೊರಗುತ್ತಿದೆ ನೌಕಕರ ಶೋಷಣೆ: ಅಕ್ಷಯ ಡಿ.ಎಂ.ಗೌಡ ಆರೋಪ
ಹಾವೇರಿ: ಜಿಲ್ಲೆ ಸೇರಿದಂತೆ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಏಜೆನ್ಸಿಗಳು ಶೋಷಣೆ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಅಕ್ಷಯ ಡಿ.ಎಂ.ಗೌಡ ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ರಾಜ್ಯದ ಸುಮಾರು 9,000 ಜನ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರವು ಒಂದು ಖಾಸಗಿ ಸಂಸ್ಥೆಗೆ ಟೆಂಡರ್ ನೀಡಿ ನೌಕರರನ್ನು ಶೋಷಣೆ ಮಾಡುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ನೂರಾರು ಹೊರಗುತ್ತಿಗೆ ನೌಕರರು ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಅವರಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ರಾಜ್ಯದಲ್ಲಿ ಸುಮಾರು 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡದೇ, ಸರ್ಕಾರ ಮೀನಾಮೇಷ ಎಣಿಸುತ್ತಿವೆ. ಗುತ್ತಿಗೆ ಪದ್ಧತಿ ಮುಂದುವರೆಸಿರುವ ಕಾರಣ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ದೊರೆಯದೇ ಜೀವನ ಸಾಗಿಸಲು ತುಂಬಾ ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ಸದನದಲ್ಲಿ ಕಾರ್ಮಿಕ ಸಚಿವರಾದಂತಹ ಸಂತೋಷ್ ಲಾಡ್ ಅವರು ಅವರು ಹೊರಗುತ್ತಿಗೆ ನೌಕರರಿಗೆ ಸೊಸೈಟಿ ಮೂಲಕ ವೇತನ ಪಾವತಿಸುವ ವ್ಯವಸ್ಥೆ ಜಾರಿಗೆ ಮಾಡಲು ಸಿದ್ಧತೆ ನಡೆದಿದ್ದು ಹಣಕಾಸು ಇಲಾಖೆಯ ಅನುಮೋದನೆಗೆ ಹೋಗಿರುವುದಾಗಿ ಮಾಹಿತಿ ನೀಡಿದರು.ಇದಕ್ಕೆ ಸಂಘವು ಅವರಿಗೆ ಅಭಿನಂದನೆ ಸಲ್ಲಿ ಸುತ್ತದೆ, ಕೋವೀಡ್ ನಂತಹ ಮಹಾಮಾರಿ ರೋಗದ ಸಮಯದಲ್ಲಿ ಪ್ರಾಣದ ಹಂಗು ತೊರೆದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ತರಬೇಕು.ಖಾಸಗಿ ಸಂಸ್ಥೆಯ ಬದಲಾಗಿ ಸರಕಾರಿ ಸಂಸ್ಥೆ, ಸೊಸೈಟಿ ಅಥವಾ ನಿಗಮ ಮಂಡಳಿ ಮೂಲಕ ವೇತನ ನೀಡಬೇಕು.ಇದರ ಜೊತೆಗೆ ಸೇವಾ ಭದ್ರತೆಯನ್ನು ಕಲ್ಪಿಸಬೇಕು.ಪ್ರತಿ ತಿಂಗಳ 5.ನೇ ತಾರೀಕಿನ ಒಳಗಾಗಿ ವೇತನ ಹಾಗೂ ಇಎಸ್ಐ ಹಾಗೂ ಪಿಎಫ್ ಹಣ ಸಂದಾಯ ಮಾಡಬೇಕು ಎಂದರು.