
ಹಾವೇರಿ : ತ್ರೈಮಾಸಿಕ ಸಾಮಾನ್ಯ ಸಭೆಗೆ ಅನಧಿಕೃತವಾಗಿ ಗೈರಾಗಿದ್ದಕ್ಕೆ ಹಾವೇರಿ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ತಾಲೂಕ ಪಂಚಾಯತ ಇಓ ಅಮಾನತು ಭರತ ಹೆಗಡೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಜುಲೈ 29 ರಂದು ದಾಂಡೇಲಿಗೆ ವರ್ಗಾವಣೆಗೊಂಡಿದ್ದ ಭರತ ಹೆಗಡೆ ಅವರು,ವರ್ಗಾವಣೆ ಆದೇಶಕ್ಕೆ ತಡೆ ತಂದಿದ್ದರು.ಅಲ್ಲದೇ,ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಆ. 1 ರಂದು ಹಾವೇರಿಯಲ್ಲೆ ಕರ್ತವ್ಯಕ್ಕೆ ಹಾಜರಾಗಿದ್ದರು. ನಿರಂತರವಾಗಿ ಮಳೆ ಬರುತ್ತಿದ್ದರು ಸಂತ್ರಸ್ಥರ ನೆರವಿಗೆ ಬಾರದ ಹಿನ್ನೆಲೆ ಮತ್ತು ಅನುಮತಿ ಪಡೆಯದೆ ಕೆಡಿಪಿ ಸಭೆಗೆ ಗೈರಾಗಿದ್ದಕ್ಕೆ ಭರತ್ ಹೆಗಡೆ ಅಮಾನತು ಮಾಡಲಾಗಿದೆ.