
ಹಾವೇರಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರುಚಿ ಬಿಂದಲ್ ಅವರು ರಾಣೇಬೆನ್ನೂರು ತಾಲ್ಲೂಕಿನ ಹಿರೇಬಿದರಿ ಗ್ರಾಮಕ್ಕೆ ಭೇಟಿ ನೀಡಿದರು.

ಇದೇ ವೇಳೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಿಇಓ ರುಚಿ ಬಿಂದಲ್ ಅವರ ಅಂಗನವಾಡಿ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಹಾಗೂ ಆಹಾರ ಪದಾರ್ಥದ ದಾಸ್ತಾನು ವಹಿಯನ್ನು ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಅಂಗನವಾಡಿಯ ನೆಲದಲ್ಲಿ ಮೇಲೆ ಕುಳಿತುಕೊಂಡು ಅಂಗನವಾಡಿ ಬಂದ ಮಕ್ಕಳನ್ನು ಆರೈಕೆ ಮಾಡಿದರು. ಈ ವೇಳೆ ಅಳುತ್ತಿದ್ದ ಮಗುವನ್ನು ಸಿಇಓ ರುಚಿ ಅವರನ್ನು ಅಪ್ಪಿಕೊಂಡ ಸಂತೈಸಿದರು.ಬಳಿಕ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಕೈಗೊಂಡ ಕ್ರಮದ ಕುರಿತು ಪರಿಶೀಲನೆ ಕೈಗೊಂಡರು. ಇದಾದ ನಂತರ, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ/ಸಿಬ್ಬಂದಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನದ ಕುರಿತು ಸಭೆ ನಡೆಸಿದರು.