
ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಇತ್ತೀಚೆಗೆ ವಿಪರೀತ ಮಳೆಯಿಂದಾಗಿ ಮನೆ ಮೇಲ್ಚಾವಣಿ ಕುಸಿದು ಸ್ಥಳೀಯ ನಿವಾಸಿಗಳಾದ ಚನ್ನಮ್ಮ ದೊಡ್ಡಬಸಪ್ಪ ಹರಕುಣಿ, ಅಮೂಲ್ಯ ಮುತ್ತಪ್ಪ ಹರಕುಣಿ , ಅನುಶ್ರೀ ಮುತ್ತಪ್ಪ ಹರಕುಣಿ ಹಾಗೂ ಯಲ್ಲವ್ವ ದೊಡ್ಡಬಸಪ್ಪ ಹರಕುಣಿ ಎಂಬವರು ಮೃತಪಟ್ಟಿದ್ದು, ಗುರುವಾರ ಅವರ ನಿವಾಸಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಮುಖ್ಯ ಚಚೇತಕ ಸಲೀಂ ಅಹ್ಮದ್ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಅವರಿಗೆ ದೊರಕಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲು ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಹಾಗೂ ವೈಯಕ್ತಿಕ ನೆಲೆಯಲ್ಲಿ 50 ಸಾವಿರ ರೂಪಾಯಿ ಸಹಾಯ ನೀಡಿ ಸ್ಥೈರ್ಯ ತುಂಬಿದರು.
ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕ್ಷೇತ್ರದ ಮುಖಂಡರಾದ ಯಾಸಿರ್ ಖಾನ್ ಪಠಾಣ್,ಅಜ್ಜಂಪೀರ್ ಫೀರ್ ಖಾದ್ರಿ, ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಸ್ಥಳೀಯ ಮುಖಂಡರುಗಳು, ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.