
ಹಾವೇರಿ: ಶಿಗ್ಗಾವಿ ವಿಧಾನಸಭೆ ಉಪಚುನಾವಣೆಯ ಆಕಾಂಕ್ಷಿಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶಿಗ್ಗಾವಿ ಉಪಚುನಾವಣೆ ಉಸ್ತುವಾರಿ ಮಯೂರ್ ಜಯಕುಮಾರ ಅವರು ಭರ್ಜರಿ ಶಾಕ್ ನೀಡಿದ್ದಾರೆ.
ಶಿಗ್ಗಾವಿ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು,ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಆಕಾಂಕ್ಷಿಗಳಿಗೆ ಶಾಕ್ ನೀಡಿ ತೆರಳಿದ್ದಾರೆ.

ಶಿಗ್ಗಾವಿ ಉಪಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಗಂಭೀರವಾಗಿ ತೆಗೆದುಕೊಂಡಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಾಗಬೇಕು ಎನ್ನುವುದು ನಮ್ಮೆಲ್ಲರ ಮೊದಲ ಆಧ್ಯತೆಯಾಗಬೇಕು.ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗಬಾರದು.ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.ಕಾರ್ಯಕರ್ತರು ಹೆಚ್ಚಿನ ಉತ್ಸಾಹದಿಂದ ಬೂತ್ ಮಟ್ಟದಲ್ಲಿ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಬೇಕು ಎಂದರು.

ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಒಬ್ಬರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಿದೆ.ಈ ಕ್ಷೇತ್ರದಲ್ಲಿ ಎಲ್ಲರೂ ಅರ್ಹತೆಯಿರುವ ಆಕಾಂಕ್ಷಿಗಳಿದ್ದಿರೀ. ಹಾಗಂತ ಉಳಿದ ಆಕಾಂಕ್ಷಿಗಳು ಕಡೆಗಣಿಸಲಾಗಿದೆ ಎಂದು ಭಾವಿಸಬಾರದು.ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ದಿನಗಳು ಬಂದಿವೆ. ಈ ಸಮಯದಲ್ಲಿ ನೀವೆಲ್ಲಾ ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದ್ರೂ ಅವರನ್ನು ಆಯ್ಕೆ ಮಾಡಲು ಮೊದಲ ಆಧ್ಯತೆ ನೀಡಬೇಕು ಎಂದರು.
ಇಂದಿನಿಂದ ನೀವು ಗುಂಪು ಕಟ್ಟಿಕೊಂಡ ಬೂತ್‌ಗಳಿಗೆ ಹೋಗಿ ಜನರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂದಲ್ಲ ಸೃಷ್ಟಿ ಮಾಡಬೇಡಿ.ಎಲ್ಲರೂ ಒಗ್ಗೂಡಿ ಬೂತ್‌ಗೆ ತೆರಳಬೇಕು.ಬ್ಲಾಕ್ ಕಾಂಗ್ರೆಸ್ ಸಮಿತಿಗಳೊಂದಿಗೆ ಸಮನ್ವಯತೆಯಿಂದ ಇರಬೇಕು.ಈ ರೀತಿಯಾಗಿ ಒಗ್ಗಟ್ಟು ಪ್ರದರ್ಶನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಲು ಶ್ರಮಿಸುವ ಪಕ್ಷದ ಕಾರ್ಯಕರ್ತರು ಉಳಿದ ಆಕಾಂಕ್ಷಿಗಳಿಗೆ ಪಕ್ಷ ಹಾಗೂ ಸರಕಾರದಲ್ಲಿ ಮುಂದಿನ ನಾಲ್ಕು ವರ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡಲಾಗುವುದು ಈ ನಾನು ನಿಮಗೆ ಪ್ರಮಾಣ ಮಾಡುವ ಮೂಲಕ ಭರವಸೆ ನೀಡುವೆ ಎಂದರು.
ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ,ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ಆರ್.ಶಂಕರ್, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ,ಕಾಂಗ್ರೆಸ್ ಮುಖಂಡ ಯಾಸೀರ್ ಖಾನ್ ಪಠಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಪಾಟೀಲ,ಎ.ಜೆ.ಮುಲ್ಲಾ,ಭೂ ನ್ಯಾಯ ಮಂಡಳಿಯ ಸದಸ್ಯ ಸುಧೀರ್ ಲಮಾಣಿ ಹಾಜರಿದ್ದರು.