BallariDistrictHaveriLatestNewsState

ತುಂಬಿದಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರ ದೈವ ವಾಣಿ

ಹಾವೇರಿ: ರಾಜ್ಯದ ಜನರು ಬಹು‌ನಿರೀಕ್ಷಿತ ಮೈಲಾರಲಿಂಗಶ್ವರನ ಕಾರ್ಣಿಕ ಶುಕ್ರವಾರ ಸಂಜೆ ಹೊರಬಿದ್ದಿದ್ದು, ಈ ಬಾರಿಯ ಕಾರ್ಣಿಕ ದೈವ ವಾಣಿ ತುಂಬಿದಕೊಡ ತುಳಲಿತಲೇ ಪರಾಕ್ ಎಂದಾಗಿದೆ.

ಕಾರ್ಣಿಕವನ್ನು ಗೊರವಪ್ಪ ರಾಮಪ್ಪ ನುಡಿದಿದ್ದು, ಈ ವರ್ಷ ರಾಜ್ಯದಲ್ಲಿ ಮಳೆ – ಬೆಳೆ ಸಮೃದ್ಧವಾಗಿರಲಿದೆ ಎಂದು ಕಾರ್ಣಿಕದ ಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.ಮೈಲಾರದ ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ಡಂಕನಮರಡಿಯಲ್ಲಿ ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ. ೧೫ ಅಡಿ ಎತ್ತರದ ಬಿಲ್ಲನೇರಿದ ಗೊರವಯ್ಯ ರಾಮಪ್ಪ ಸದ್ದಲೇ ಎಂದು ಅಲ್ಲಿ ನೆರೆದಿದ್ದ ಜನರನ್ನು ಸುಮ್ಮನಾಗಿಸಿ, ಸಂಪಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾನೆ. ಮೈಲಾರ ಲಿಂಗೇಶ್ವರನ ಕಾರ್ಣಿಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾಗಿದ್ದಾರೆ. ಈ ಭವಿಷ್ಯವಾಣಿ ಬಗ್ಗೆ ರಾಜ್ಯದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.
ಅತಿವೃಷ್ಟಯಿಂದ ಕಂಗೆಟ್ಟಿದ್ದ ನಾಡಿನ ಜನತೆಗೆ ಮೈಲಾರಲಿಂಗದ ಕಾರ್ಣಿಕ ಸಿಹಿ ಸುದ್ದಿ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿದೆ. ಇದರಿಂದ ನಾಡಿನ ರೈತರ ಮುಖದಲ್ಲಿ ನಗುವಿನ ಸಿಂಚನ ಮೂಡಿಸುವ ಭರವಸೆ ಸಿಕ್ಕಂತಾಗಿದೆ. ಈ ಹಿನ್ನೆಲೆ ಮೈಲಾರ ಲಿಂಗದ ಕಾರ್ಣಿಕ ರಾಜ್ಯದಲ್ಲಿ ಗಮನ ಸೆಳೆದಿದೆ.
ಕಳೆದ ಬಾರಿಯ ಕಾರ್ಣಿಕ ಏನಿತ್ತು? ಕಳೆದ ಬಾರಿ “ಸಂಪಾಯಿತಲೇ ಪರಾಕ್” ಎಂಬ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದ. ಕೇವಲ ಮಳೆ-ಬೆಳೆಗೆ ಸಂಬಂಧಿಸಿದಂತೆ ಕಾರ್ಣಿಕವನ್ನು ನುಡಿಯಲಾಗಿದೆ ಎನ್ನಲಾಗಿದೆ. ಐತಿಹಾಸಿಕ ಮೈಲಾರ ಕಾರ್ಣಿಕ “ತುಂಬಿದಕೊಡ ತುಳುಕಿತಲೇ ಪರಾಕ್” ಕಾರ್ಣಿಕ ನುಡಿ ಕೇಳಿ ಲಕ್ಷಾಂತರ ಭಕ್ತರು ಪುನೀತರಾಗಿದ್ದಾರೆ. ಈ ಭವಿಷ್ಯವಾಣಿ ಬಗ್ಗೆ ರಾಜ್ಯದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial