
ಹಾವೇರಿ: ಭಾರತದ ಮಾಜಿ ಪ್ರಧಾನ ಮಂತ್ರಿ, ಅಪರೂಪದ ರಾಜನೀತಿಜ್ಞ ಡಾ. ಮನಮೋಹನ್ ಸಿಂಗ್ ಅವರು ನಿಧನರಾಗಿದ್ದು ಅವರ ಆತ್ಮಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎಂ ಹಿರೇಮಠ್, ಮಾಜಿ ಶಾಸಕರಾದ ನೆಹರು ಓಲೆಕಾರ ಕರ್ಜಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಎಂ ಎಂ ಮೈದೂರು ಮಾತನಾಡಿ, ಈ ದೇಶಕ್ಕೆ ಮನಮೋಹನ್ ಸಿಂಗ್ ಅವರ ಕೊಡುಗೆ ಅಪಾರ ಈ ದೇಶದಲ್ಲಿ ಕ್ರಾಂತಿಕಾರಿ ಆರ್ಥಿಕ ಅಭಿವೃದ್ಧಿಯನ್ನು ತಂದ ಧೀಮಂತ ನಾಯಕ. ಈ ದೇಶದ ಬಡವರ ಬಗೆಗಿನ ಕಾಳಜಿ ಹೊಂದಿದ ಮೇರು ವ್ಯಕ್ತಿತ್ವದ ಗುಣ ಹೊಂದಿದ ಪ್ರಧಾನಿಯಾಗಿದ್ದರು. ಅವರ ಅಗಲಿಕೆ ಈ ದೇಶಕ್ಕೆ ತುಂಬಲಾರದ ನಷ್ಟ ಎಂದರು. ಸಭೆಯಲ್ಲಿ ಹಾವೇರಿ ಶಹರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಭುಗೌಡ ಬಿಷ್ಟನಗೌಡ್ರ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ, ಎಸ್ ಎಸ್ ಖಾಜಿ, ಬಾಬು ಸಾಬ್ ಮೊಮಿನಗಾರ, ಶಾಂತಕ್ಕ ಶಿರೂರು, ಜಯಶ್ರೀ ಶಿವಪುರ, ದಾಸಪ್ಪ ಕರ್ಜಗಿ, ಆಯುಬ್ ಖಾನ್ ಪಠಾಣ, ವೆಂಕಟೇಶ್ ಬಿಜಾಪುರ್, ಪ್ರಕಾಶ ಹಂದ್ರಾಳ, ರಾಜೇಶ್ ಕಾಶಪ್ಪನವರ, ನವೀದ ವರ್ದಿ, ಜಾಫರ್ ಅತ್ತಾರ, ಉಮರ ಇನಾಮದಾರ, ಪವನ್ ದೊಡ್ಡಮನಿ ಸೇರಿದಂತೆ ಮುಂತಾದವರು ಹಾಜರಿದ್ದರು.