ಹಾವೇರಿ: ಹಗಲು ಕಾಂಗ್ರೆಸ್‌ನಲ್ಲಿ, ರಾತ್ರಿ ಬಿಜೆಪಿಯಲ್ಲಿರುವ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.
ಶಿಗ್ಗಾವಿಯಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ,ಕೆಲವರು ಕಾಂಗ್ರೆಸ್ ಜೊತೆ ಇದ್ದು ರಾತ್ರಿ ಬಿಜೆಪಿ ಜೊತೆಗೆ ಇರ್ತಾರೆ.ರಾತ್ರಿ ಒಂದು ಪಾರ್ಟಿ ಹಗಲು ಹೊತ್ತು ಒಂದು ಪಾರ್ಟಿ ಮಾಡಬಾರದು.ನಿಮಗೆ ಆಸೆ ಇದ್ರೆ ನಮ್ಮ ಜೊತೆ ಇರಿ, ಇಲ್ಲದಿದ್ದರೆ ನಾಳೆಯೇ ಬೊಮ್ಮಾಯಿ ಜೊತೆಗೆ ಹೋಗಿ ಎಂದರು.
ಕಾರ್ಯಕರ್ತರ ಮನಸ್ಸಿನಲ್ಲಿ ಆತ್ಮವಿಶ್ವಾಸದ ಮಾತು ಬಂದಿದೆ. ನಾವು ಯಾರು ಇಲ್ಲದೇ ಇದ್ದಾಗ ಇಲ್ಲಿನ ಕಾರ್ಯಕರ್ತರ 9000 ಮತಗಳ ಅಂತರವನ್ನು ನೀವು ಕೊಟ್ಟಿದಿರೀ.ಈಗ ನಾವು ಬಂದಿರುವ ನಾಯಕರು ಎಲ್ಲರೂ ಸೇರಿ 90. ಮತಗಳನ್ನು ಮಾಡಿಕೊಡುವ ಶಕ್ತಿಯನ್ನು ನಾವು ನಿಮಗೆ ಕೊಡುತ್ತೇವೆ ಎಂದರು.