ಹಾವೇರಿ : ಪಕ್ಷ ಬಿಟ್ಟು ಹೋಗುವವರು ಈಗಲೇ ಪಕ್ಷವನ್ನು ಬಿಟ್ಟು ಹೋಗಿ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಪಕ್ಷದಲ್ಲಿದ್ದುಕೊಂಡ ವಿರೋಧಿ ಕೆಲಸ ಮಾಡಿವ ಮುಖಂಡರಿಗೆ ಎಚ್ಚರಿಕೆ ಸಂದೇಶ ನೀಡಿದರು.
ಶಿಗ್ಗಾವಿಯಲ್ಲಿ ಮಾಧ್ಯಮದಲ್ಲಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿದ್ದಾರೆ ಪಕ್ಷ ಗೆಲ್ಲುವ ಅವಕಾಶ ಇದೆ.ಹಿಂದೆ ಶಿಗ್ಗಾವಿಯಲ್ಲಿ ಒಳ ಒಪ್ಪಂದದಿಂದ ಸೋತಿದ್ದೇವೆ.ಮುಂಚೆ ಒಳ ಒಪ್ಪಂದ ಆಗುತ್ತಿತ್ತು, ಈಗ ಒಳ ಒಪ್ಪಂದ ಆಗುವ ಅವಕಾಶ ಕಡಿಮೆ ಇದೆ.ಕೊನೆಗೆ ಬಿಟ್ಟು ಹೋಗುವುದು ಬೇಡ, ಹಿಂದೆ ಆದ ಘಟನೆ ಮತ್ತೆ ಆಗಬಾರದು.ಟಿಕೆಟ್ ಘೋಷಣೆ ಆದ ಮೇಲೆ ಇರ್ತಾರೋ ಹೋಗ್ತಾರಾ ಕಾದು ನೋಡೋಣ ಎಂದರು.
ಒಂದು ಘಟನೆ ಆಗಿದೆ ನಾಗಮಂಗಲದಲ್ಲಿ.
ಪೊಲೀಸರು ಹ್ಯಾಂಡಲ್ ಮಾಡ್ತಾರೆ.ಧ್ವಜ ವಯಕ್ತಿಕವಾಗಿ ಹಾರಿಸ್ತಾರೆ ಪೊಲೀಸರು ಕೇಸ್ ಹಾಕ್ತಾರೆ.ಕಿಡಿಗಳು ಆ ರೀತಿ ಮಾಡ್ತಾರೆ, ಬೇರೆ ದೇಶದ ಜೊತೆಗೆ ಒಳ್ಳೆಯ ಸಂಬಂಧ ಇದ್ರೆ ಧ್ವಜ ಹಾರಿಸಬಹುದು.ಬೇರೆ ದೇಶದ ಜೊತೆ ಸಂಬಂಧ ಹೇಗೆ ಇರುತ್ತದೆ ಎನ್ನೋದು ಮಹತ್ವದ ವಿಚಾರ.ಪಾಕಿಸ್ತಾನ ಧ್ವಜ ವಿರೋಧ ಮಾಡ್ತಿವಿ ಸಂಬಂಧ ಸರಿಯಿಲ್ಲ ಎನ್ನುವ ಕಾರಣಕ್ಕೆ ಎಂದರು.