ಹಾವೇರಿ: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಡಿ ಹಾಗೂ ಸಿಬಿಐ ಮೂಲಕ ದಬ್ಬಾಳಿಕೆಯ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ದೂರಿದರು.
ಶಿಗ್ಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೂತ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಹೆದರಿಸಿ ಬೆದರಿಸಿ ಇಡಿ, ಸಿಬಿಐ ಮೂಲಕ ಬಿಜೆಪಿಯವರು ಕಾಂಗ್ರೆಸ್ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದೇವೆ.16 ತಿಂಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ.ಹೊಟ್ಟೆಕೊಚ್ಚಿನಿಂದ ಸರಕಾರ ಬುಡಮೇಲು ಮಾಡಲು ಪ್ರಯತ್ನ ನಡೆಸಿದ್ದಾರೆ. ಯಾವುದೇ ಶಕ್ತಿ ಬಂದ್ರು ಐದು ವರ್ಷ ಏನು ಮಾಡಲು ಸಾಧ್ಯವಿಲ್ಲ.ಕಾಂಗ್ರೆಸ್ ಅಲುಗಾಡಿಸಲು ಸಾಧ್ಯವಿಲ್ಲ.
ಸುಳ್ಳು ಆರೋಪ ಮಾಡಿ, ಸುಳ್ಳೆ ಸತ್ಯ ಮಾಡಲು ಹೊರಟಿದ್ದಾರೆ.ಮೋದಿ, ಅಮಿತ್ ಶಾ ಸಂಚು ಮಾಡಿ ಸಿದ್ದರಾಮಯ್ಯ ಸರಕಾರ ಬುಡಮೇಲು ಮಾಡಲು ಮೂಡಾ ಹಗರಣದ ಆರೋಪ ಮಾಡಿದ್ದಾರೆ.ಹೆಣಗಳ ರಾಶಿಗಳ ಮೇಲೆ ರಾಜಕೀಯ ಮಾಡಿದವರು ಬಿಜೆಪಿ.
ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡೋರು ಬಿಜೆಪಿಯವರು.ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ ಎಂದು ಮೋದಿಯವರಿಗೆ ಭಯ ಸುರುವಾಗಿದೆ.ಅಭ್ಯರ್ಥಿ ಯಾರೆ ಆಗಲಿ, ಹೈಕಮಾಂಡ್ ಹೇಳಿದಂತೆ ಒಗ್ಗಟ್ಟಿನಿಂದ ಚುನಾವಣೆ ಯಲ್ಲಿ ಕೆಲಸ ಮಾಡಿ.ಯಾವುದೇ ಕ್ಷಣದಲ್ಲಿ ಉಪಚುನಾವಣೆ ಘೋಷಣೆ ಆಗಬಹುದು.ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಮೂರು ಕಡೆ ಸಿದ್ದತೆ ನಡೆದಿದೆ.ಕಾಂಗ್ರೆಸ್ ಗೆ ಸೋಲಾಗುತ್ತಿರೋದು ಕಾಂಗ್ರೆಸ್ ನವರಿಂದ.
ಕಾಂಗ್ರೆಸ್ ಗೆ ದ್ರೋಹ ಮಾಡಲು ಹೋಗಬೇಡಿ. ಎಲ್ಲರಿಗೂ ಸ್ಥಾನ ಮಾನ ಪಕ್ಷದಲ್ಲಿ ಸಿಗಲಿದೆ ಎಂದರು.