ಹಾವೇರಿ: ಶಿಗ್ಗಾವಿ ಉಪಚುನಾವಣೆ ಸಮಯದಲ್ಲಿ ಯಾರೇ ಪಕ್ಷ ಬಿಟ್ಟು ಹೋದರು, ಇಲ್ಲಿ ಕಾಂಗ್ರೆಸ್ ಗೆಲ್ಲುವುದು ಪಕ್ಕಾ ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ಶಿಗ್ಗಾವಿಯಲ್ಲಿ ನಡೆದ ಕಾಂಗ್ರೆಸ್ ಬೂತ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ,ಒಬ್ಬರಿಗೆ ಟಿಕೆಟ್ ನೀಡುತ್ತೇವೆ, ಉಳಿದವರು ಅವರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು.ಚುನಾವಣೆಯಲ್ಲಿ ಅಭ್ಯರ್ಥಿ ಮುಖ್ಯವಲ್ಲ, ಕಾಂಗ್ರೆಸ್ ಗೆಲುವು ಮುಖ್ಯ.ಪಕ್ಷ ವಿರೋಧಿಗಳಿಗೆ ಮತ್ತೆ ಪಕ್ಷದಲ್ಲಿ ಅವಕಾಶವಿಲ್ಲ.ಬಾಡಿ ಸ್ಕ್ಯಾನ್ ಮಾಡಿದಂತೆ ಶಿಗ್ಗಾವಿಯಲ್ಲಿ ಸ್ಕ್ಯಾನ್ ಮಾಡಿದ್ದೇವೆ.ನಾವು ಟಿಕೆಟ್ ಕೊಡಲು ಬಂದಿಲ್ಲ, ಚುನಾವಣೆ ಮಾಡಲು ಬಂದಿದ್ದೇವೆ.ಯಾರೆ ಪಕ್ಷ ಬಿಟ್ಟು ಹೋದರು ಕಾಂಗ್ರೆಸ್ ಗೆಲುವು ಪಕ್ಕಾ ಎಂದರು.
ನೂರಕ್ಕೆ ನೂರು ಶಿಗ್ಗಾವಿಯಲ್ಲಿ ಗೆಲ್ಲುವ ಅವಕಾಶ ಕಾಂಗ್ರೆಸ್ ಗೆ ಇದೆ.ಡಿಕೆಸಿ, ಸಿದ್ದರಾಮಯ್ಯನವರು ಅಭ್ಯರ್ಥಿ ಆಯ್ಕೆ ಮಾಡುತ್ತಾರೆ.ಯಾರೆ ಪಕ್ಷ ಬಿಟ್ಟು ಹೋದರು ಕಾರ್ಯಕರ್ತರು ಗಟ್ಟಿಯಾಗಿರಬೇಕು.
ಟಿಕೆಟ್ ಆಕಾಂಕ್ಷಿಗಳು ವೇದಿಕೆ ಮೇಲೆ ಪ್ರತಿಜ್ಞೆ ಮಾಡಿದ್ದಾರೆ.ಗೋವಾದಲ್ಲಿಯು ಪ್ರತಿಜ್ಞೆ ಮಾಡಿಸಿದ್ವಿ 8 ಜನರು ಆಮೇಲೆ ಬಿಟ್ಟು ಹೋದರು.ಶಿಗ್ಗಾವಿಯಲ್ಲಿಯು ಬಿಟ್ಟು ಹೋಗಬಹುದು.ಕಾರ್ಯಕರ್ತರ ಮೇಲೆ ನಂಬಿಕೆಯಿದೆ. ಕಾರ್ಯಕರ್ತರ ಮೂಲಕ ಚುನಾವಣೆ ಮಾಡುತ್ತೇವೆ ಎಂದರು.