ಶಿಗ್ಗಾವಿ: ನಮ್ಮ ನಡೆ ಕಾರ್ಯಕರ್ತರ ಕಡೆ ಎಂಬ ದೇಹ್ಯ ವಾಕ್ಯದಡಿಯಲ್ಲಿ ಹೊಸೂರು ಯತ್ನಳ್ಳಿ ತಾಂಡ ಹಾಗೂ ಮೊಸಳಿಕೊಪ್ಪ ,ಅರಟಾಳ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ದುಂಡಿಗೌಡ್ರ್ ನೇತೃತ್ವದಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳಿಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಾಂತ್ ದುಂಡಿಗೌಡ್ರು ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂಬರುವ ಉಪಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ನಿಶ್ಚಿತ. ಏಕೆಂದರೆ ನಮ್ಮ ಅಜೆಂಡ ಅಭಿವೃದ್ಧಿಯೊಂದೇ ಮತ್ತು ಸರಕಾರದಿಂದ ಎಲ್ಲಾ ಯೋಜನೆಗಳನ್ನು ಕ್ಷೇತ್ರದ ಜನರ ಮನೆ ಮನೆ ತಲುಪಿಸುವಂತಹ ಕಾರ್ಯಾ ಆಗಿದೆ. ಸರ್ಕಾರದ ಸೌಲಭ್ಯಗಳು ಸದ್ಬಳಕೆಯಾಗಿದೆ. ಪ್ರಹ್ಲಾದ್ ಜೋಶಿ ಅವರ ಕೇಂದ್ರ ಸರ್ಕಾರದ ಯೋಜನೆಗಳು ಬಡವರ ಪರವಾಗಿವೆ. ಆದ್ದರಿಂದ ಬಿಜೆಪಿಯ ಗೆಲುವು ನಿಜವಾದ ಅಭಿವೃದ್ಧಿಯ ಗೆಲುವು ಎಂದು ಅಭಿಪ್ರಾಯ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ ಎನ್ ವೆಂಕೋಜಿ, ಹನುಮರೆಡ್ಡಿ ನಡುವಿನಮನಿ, ತಿಪ್ಪಣ್ಣ ಸಾತಣ್ಣವರ್ ,ಸಂಗಮೇಶ್ ಕಂಬಾಳಿಮಠ, ಬಸವರಾಜ ನಾರಾಯಣಪುರ ,ಸಂತೋಷ್ ಹುಣಶ್ಯಾಳ್, ಸಿ ವಿ ಮತ್ತಿಗಟ್ಟಿ ನಾಗಪ್ಪ ಅದೃಶ್ಯಪ್ಪನವರ್, ರಮೇಶ್ ಸಾತಣ್ಣವರ್, ಉಪಸ್ಥಿತರಿದ್ದರು ಇವರೊಂದಿಗೆ ಗ್ರಾಮದ ಹಿರಿಯರಾದ ಶೇಖರಗೌಡ ಪಾಟೀಲ್, ಶಂಕ್ರಪ್ಪ ಲಕ್ಕಣ್ಣವರ್, ಆದಪ್ಪ ಚಬ್ಬಿ ,ನೀಲಪ್ಪ ಬಾರಕೆರ, ವೀರನಗೌಡ ದೊಡ್ಡಗೌಡ್ರು, ಶಂಕರಗೌಡ ಪಾಟೀಲ್, ಸುಧೀರ್ ಚಬ್ಬಿ ,ಮಂಜನಗೌಡ ಪಾಟಿಲ್, ಈರಪ್ಪ ಡವಗಿ ,ಎಸ್ ಆರ್ ಅದರಗುಂಚಿ, ಚನ್ನಪ್ಪ ಬಿಂದ್ಲಿ ,ನಾಗರಾಜ್ ಸೂರಗೊಂಡ ,ಶಿವನಗೌಡ ಪಾಟೀಲ್ ,ಅರುಣ್ ಇಂದೂರ್, ಮಹಾದೇವ ದೇವತಿ, ನಿತ್ಯಾನಂದ ಬರದೂರ, ಅರ್ಜಪ್ಪ ಲಮಾಣಿ, ಮಾಂತೇಶ್ ಲಮಾಣಿ ,ಕೃಷ್ಣ ಲಮಾಣಿ, ಧರಣೇಂದ್ರ ಪುಟ್ಟಣ್ಣವರ, ಬಾಹುಬಲಿ ಬಿಶೆಟ್ಟಿ ,ಗದಿಗೆಪ್ಪ ಹೊನ್ನಳ್ಳಿ ಹಾಗೂ ಗ್ರಾಮದ ಎಲ್ಲಾ ಗೌರವಾನ್ವಿತ ಮುಖಂಡರು ಹಿರಿಯರು ಯುವಕರು ಹಾಜರಿದ್ದರು.
Check Also
Close
-
ಮಲ್ಲಯ್ಯಜ್ಜನವರ 24. ನೇ ಪುಣ್ಯ ಸ್ಮರಣೋತ್ಸವ:4 days ago