ಹಾವೇರಿ: ಶಾಲೆಯ ತರಗತಿಯಲ್ಲಿ ಅಭ್ಯಾಸ ಮಾಡುವಾಗ ಮೇಲ್ಚಾವಣಿಯ ಕಟ್ಟಿಗೆ ಮುರಿದು ಬಿದ್ದು ವಿದ್ಯಾರ್ಥಿ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ನೀರಲಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ವಿನಾಯಕ ಮೊರೆ ಎಂಬ 5.ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯ ಮೇಲೆ ಕೊಠಡಿಯ ಮೇಲ್ಚಾವಣೆಯ ಕಟ್ಟಿಗೆ ತುಂಡು ಬಿದ್ದ ಪರಿಣಾಮ ವಿದ್ಯಾರ್ಥಿಯ ಕಾಲಿಗೆ ಗಾಯವಾಗಿದೆ.ಮೇವುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಶಿಕ್ಷಕರು ಚಿಕಿತ್ಸೆ ಕೋಡಿಸಿದ್ದಾರೆ.ಶಾಲೆಯನ್ನು ಕಟ್ಟಿಗೆ ತುಂಡುಗಳನ್ನು ಬಳಸಿ ದುರಸ್ಥಿ ಮಾಡಲಾಗಿದೆ.ಈ ರೀತಿಯ ಕಟ್ಟಿಗೆ ತುಂಡುಗಳು ವಿದ್ಯಾರ್ಥಿಗಳ ಮೇಲೆ ನಿತ್ಯ ತುಂಡರಿಸಿಕೊಂಡ ಬಿಳುತ್ತಿವೆ.ದುರಸ್ತಿಯ ಕೊಠಡಿಗಳಲ್ಲಿ ನಿತ್ಯ ಜೀವಭಯದಲ್ಲೆ ವಿದ್ಯಾರ್ಥಿಗಳು ಪಾಠ ಕಲಿಯುವಂತ ಸ್ಥಿತಿ ನಿರ್ಮಾಣವಾಗಿದೆ.ಇಂದು ನಾಳೆ ಬಿಳುವ ಸ್ಥಿತಿಯಲ್ಲಿ ಬಿಸಿಯೂಟದ ಕೊಣೆ ಸಹ ಇದೆ.