
ಹಾವೇರಿ: ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಕಳಲಕೊಂಡ ಗ್ರಾಮದಲ್ಲಿ ಮೇಕ್ ವೆಲ್‌ಫೆರ್ ಫೌಂಡೇಶನ್ ವತಿಯಿಂದ ನಡೆದ ಅಕ್ಷರೋತ್ಸವಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಚಾಲನೆ ನೀಡಿದರು.

ಮೇಕ್ ವೆಲ್‌ಫೇರ್ ಸಂಸ್ಥೆ ಉತ್ತರ ಕರ್ನಾಟಕ ಗ್ರಾಮೀಣ ಭಾಗದ ಸರ್ವ ಧರ್ಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಊಟ,ವಸತಿ ಹಾಗೂ ಶಿಕ್ಷಣ ನೀಡುತ್ತ ಬಂದಿದೆ. ಇಂತಹ ಸಂಸ್ಥೆಯು ದಶಮಾನೋತ್ಸವದ ಅಂಗವಾಗಿ ಅಕ್ಷರೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಕಳೆದ ಹತ್ತು ವರ್ಷಗಳ ಹಿಂದೆ ಚಿಕ್ಕದಾಗ ಕಟ್ಟಡದಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ಇಂದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಶ್ಲಾಘನೀಯ. ಈ ಸಂಸ್ಥೆಯ ದುಬೈ ಕಾರ್ಯಕ್ರಮಕ್ಕೆ ನಾನ ಹೋಗಿ ಬಂದಿರುವೆ. ಈ ಸಂಸ್ಥೆಯು ಅನೇಕ ಬಂದಿದೆ ಎಂದರು.
ಖಾಸಗಿ ರಂಗದಲ್ಲಿ ಇಷ್ಟೊಂದು ಸಮಾಜ ಉದ್ಧಾರಕ್ಕಾಗಿ ಇಂತಹ ಕೆಲವ ಮುಸ್ತಫಾ ಅವರು ಚಿಕ್ಕಂದಿನಿಂದಲೇ ಹೆಚ್ಚು ಓದಿಕೊಂಡು ಬಂದಿರುವರು. ಅನೇಕ ಸಾಮಾಜಿಕ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹುಟ್ಟಿದ ಊರಿನಲ್ಲಿ ಕೆಲಸ ಮಾಡುವುದು ಕಷ್ಟ. ಹೀಗಿರುವಾಗ ಮುಸ್ತಫಾ ಅವರು ದೂರದ ಉತ್ತರ ಕರ್ನಾಟಕ ಕಡೆಗೆ ಬಂದು ಶಿಕ್ಷಣ ಕ್ರಾಂತಿ ಮಾಡುತ್ತಿರುವುದು ಹೆಮ್ಮೆಯ ವಿಚಾರ.ಇಂತಹ ಕೆಲಸದಲ್ಲಿ ಇಲ್ಲಿನ ಜನರು ಸಹಕಾರ ತುಂಬಾ ಅಮೂಲ್ಯ ಆಗಿರುತ್ತದೇ. ಇದನ್ನ ಬೆಳೆಸುವ ನಿಟ್ಟಿನಲ್ಲಿ ನೀವು ಎಲ್ಲರೂ ಒಂದಾಗಬೇಕು ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ,ಮೇಕ್ ವೇಲ್‌ಫೆರ್ ಫೌಂಡೇಶನ್ ಅವರು ಸರಕಾರ ಮಾಡುವ ಕೆಲಸವನ್ನು ಮಾಡಿದ್ದಾರೆ. ಖಾಸಗಿ ರಂಗಕ್ಕೆ ಒಮ್ಮೆಗೆ ಹೆಚ್ಚಿನ ನೇರವು ನೀಡಲು ಸಾಧ್ಯ ಆಗಲ್ಲ. ಹಂತ ಹಂತವಾಗಿ ಸಹಕಾರ ನೀಡಲಾಗುವುದು.ಈ ಸಂಸ್ಥೆ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಯಾಸೀರ್ ಖಾನ್ ಪಠಾಣ, ಅಗಡಿ ಅಕ್ಕಿ ಮಠದ ಗುರುಲಿಂಗ ಶ್ರೀಗಳು ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಶಿಕ್ಷಕರು ಹಾಜರಿದ್ದರು.