ಸವಣೂರು: ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ಶ್ರೀ 108 ತಪಸ್ವಿ ಶ್ರೀ ಶ್ರೀ ಮಲ್ಲಯ್ಯಜ್ಜನವರ 24ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಮುಖವಾಗಿ ಲಚ್ಚಣ ಸಿದ್ದಲಿಂಗ ಮಹಾರಾಜರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. ಗ್ರಾಮದೇವಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಶ್ರೀ ಮಲ್ಲಯ್ಯಜ್ಜನವರ ಮಠದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಮೆರವಣಿಗೆಯಲ್ಲಿ ವಿಶೇಷವಾಗಿ ಗ್ರಾಮದ ತಾಯಂದಿರು ಬುತ್ತಿ ಪೂಜೆಯ ಮೂಲಕ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿರುವ ಅಡುಗೆಯನ್ನು ಬಿದುರಿನ ಬುಟ್ಟಿಯಲ್ಲಿಟ್ಟುಕೊಂಡು ಮೆರವಣಿಗೆಯ ದಾರಿ ಉದ್ದಕ್ಕೂ ನಡೆದುಕೊಂಡು ಬಂದು ಸೇವೆ ಸಲ್ಲಿಸಿದರು.
ಗ್ರಾಮದ ರೈತರೆಲ್ಲರೂ ತಮ್ಮ ತಮ್ಮ ಎತ್ತು ಚಕ್ಕಡಿಗಳನ್ನು ಶೃಂಗರಿಸಿಕೊಂಡು ತಮ್ಮ ತಮ್ಮ ಚಕ್ಕಡಿಯಲ್ಲಿ ಮಠಾಧೀಶರನ್ನು ಹಾಗೂ ಗ್ರಾಮದ ಗುರುಗಳನ್ನು ಗ್ರಾಮದ ಗುರುಹಿರಿಯರನ್ನು ಕೂರಿಸಿಕೊಂಡು ಬಂದರು.ಸಂಜೆ ಮಲ್ಲಯ್ಯಜ್ಜನವರ ಪುರಾಣ ಪ್ರವಚನ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಶಿರಹಟ್ಟಿಯ ಶ್ರೀ ಫಕೀರ ಸ್ವಾಮಿ ಅಜ್ಜನವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಷಟಸ್ಥಲ ಬ್ರಹ್ಮ, ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು,ಪರಮಪೂಜ್ಯ ಶಿವ ಪಂಚಾಕ್ಷರಿ ಮಹಾಸ್ವಾಮಿಗಳು, ಮಡಿವಾಳೇಶ್ವರ ಮಠ ಬೂಡರ್ ಕಟ್ಟಿ, ಮಾತೋಶ್ರೀ ಅಕ್ಕಮಹಾದೇವಿ ಕಾಶಿಲಿಂಗೇಶ್ವರ ಮಠ ಇಂಗಳಗೇರಿ ತಾಲೂಕು ಮುಧೋಳ್, ಪರಮಪೂಜ್ಯ ರಮೇಶ ಅಜ್ಜನವರು ಧ್ಯಾನ ಮತ್ತು ಯೋಗಾಶ್ರಮ ಗೋನಾಳ, ಶಂಕ್ರಯ್ಯ ಫಕೀರಯ್ಯ ಹಿರೇಮಠ ಗುರುಗಳು, ಸಿದ್ದಲಿಂಗಯ್ಯ, ಬಸವಣ್ಣಯ್ಯ ಬರಗುಂಡಿಮಠಧ ಗುರುಗಳು, ಹಾಗೂ ನಂದಿ ಬಸವೇಶ್ವರ ಸೇವಾ ಸಮಿತಿಯ ಸದಸ್ಯರು, ಗ್ರಾಮದ ಗುರು ಹಿರಿಯರು ತಾಯಂದಿರು ಸಕಲ ಸದ್ಭಕ್ತರು ಹಾಜರಿದ್ದರು.