
21ನೇ ಶತಮಾನದಲ್ಲಿ ಜ್ಞಾನ ಇರುವವರು ಜಗತ್ತನ್ನು ಆಳುತ್ತಾರೆ: ಬಸವರಾಜ ಬೊಮ್ಮಾಯಿ
ಹಾವೇರಿ: ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಅವಕಾಶ ಕೊಟ್ಟರೆ ಅವರು ಯಾವುದೇ ಮಕ್ಕಳ ಜೊತೆ ಪೈಪೋಟಿ ಮಾಡುತ್ತಾರೆ. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಅವರು ಇಂದು ಸವಣೂರಿನಲ್ಲಿ ಶ್ರೀಮತಿ ಗಂಗಮ್ಮ ಎಸ್ ಬೊಮ್ಮಾಯಿ ಕಾನ್ವೆಂಟ್ ಸ್ಕೂಲಿನ 14ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 21ನೇ ಶತಮಾನ ಜ್ಞಾನದ ಶತಮಾನ, ಯಾರಿಗೆ ಜ್ಞಾನ ಇದೆಯೋ ಅವರು ಮುಂದೆ ಬಂದು ಜಗತ್ತನ್ನು ಆಳುತ್ತಾರೆ. ಒಂದು ಕಾಲದಲ್ಲಿ ಯಾರ ಬಳಿ ಭೂಮಿ ಇತೋ ಅವರು ಜಗತ್ತು ಆಳುತ್ತಿದ್ದರು. ಈಗ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಜ್ಞಾನದಿಂದ ವಿಜ್ಞಾನ ಬರುತ್ತದೆ. ವಿಜ್ಞಾನದಿಂದ ತಂತಜ್ಞಾನ ಬರುತ್ತದೆ. ಹೀಗೆ ಮಕ್ಕಳು ಬೆಳೆಯುತ್ತಾರೆ. ಹುಟ್ಟಿನಿಂದ ಯಾರೂ ಪ್ರತಿಭಾವಂತರಿರುವುದಿಲ್ಲ. ನಾವು ಯಾವ ರೀತಿಯ ಶಿಕ್ಷಣ ನೀಡುತ್ತೇವೆ. ಶಿಕ್ಷಣ ಸಂಸ್ಥೆಯಲ್ಲಿ ನಾವು ಹೇಗೆ ಗುಣಮಟ್ಟ ಉಳಿಸಿಕೊಳ್ಳುತ್ತೇವೆ ಹಾಗೇ ಮಕ್ಕಳು ಬೆಳೆಯುತ್ತಾರೆ. ಇದು ಎಲ್ಲರ ಭವಿಷ್ಯ ಬರೆಯುವ ಶಿಕ್ಷಣ ಸಂಸ್ಥೆ ಆಗಲಿ ಎಂದು ಹಾರೈಸುವುದಾಗಿ ತಿಳಿಸಿದರು.
ನಮ್ಮ ದೇಶಕ್ಕೆ ನಮ್ಮಷ್ಟಕ್ಕೆ ನಾವು ಗಣರಾಜ್ಯ ಎಂದು ಒಪ್ಪಿಕೊಂಡು 76 ವರ್ಷ ಆಗಿದೆ. ದೇಶ ಬಹಳಷ್ಟು ಪಗತಿ ಕಂಡಿದೆ. ಪ್ರಜಾಪಭುತ್ವದ ಬೇರು ಗಟ್ಟಿಯಾಗಿವೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಜಾತೃತ್ವ ಎಲ್ಲವ ಸಂವಿಧಾನದದಿಂದ ಕಾಪಾಡಿಕೊಮಡು ಬಂದಿದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರನ್ನು ಗೌರವದಿಂದ ಸರಿಸುತ್ತೇನೆ ಎಂದರು.
ಇಂದು ನಮ್ಮ ತಾಯಿ ಗಂಗಮ್ಮ ಸೋಮಪ್ಪ ಬೊಮ್ಮಾಯಿಯವರ ಜನ್ಮ ದಿನಾಚರಣೆ, ಪ್ರತಿ ವರ್ಷ
ಗಣರಾಜ್ಯೋತ್ಸವದ ಜೊತೆಗೆ ನಮ್ಮ ತಾಯಿಯ ಜನ್ಮ ದಿನಾಚರಣೆಯನ್ನು ಸತತ 14 ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಈ ಸಂಸ್ಥೆ ಕಟ್ಟಿದ್ದಾರೆ. ಈ ಸಂಸ್ಥೆಯಿಂದ ಸಾವಿರಾರು ಮಕ್ಕಳು ತೇರ್ಗಡೆಯಾಗಿ ಸಾಕಷ್ಟು ಉನ್ನತ ಶಿಕ್ಷಣ ಪಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಇದರಲ್ಲಿ ಶಿವಾನಂದ ಬೋಳಶೆಟ್ಟಿ ಹಾಗೂ ರಾಜಶೇಖರ ಗುರುಸ್ವಾಮಿ ಮಠ ಅವರ ಶ್ರಮ ಕಾರಣ. ಮಕ್ಕಳ ಮೇಲಿನ ಅವರ ಪ್ರೀತಿ ಕಾರಣ ಎಂದು ಹೇಳಿದರು.
ಈ ಸಂಸ್ಥೆಗೆ ನಮ್ಮ ತಾಯಿಯ ಹೆಸರು ಇಟ್ಟಿರುವುದರಿಂದ ಬಹಳಷ್ಟು ಜನರು ಇದಕ್ಕೆ ನಾನು ಸಾಕಷ್ಟು ಸಹಾಯ ಮಾಡಿದ್ದೇನೆ ಎಂದುಕೊಂಡಿರಬಹುದು. ಇದಕ್ಕೆ ನನ್ನ ಕೊಡುಗೆ ಏನೂ ಇಲ್ಲ. ಆದರೆ, ಅವರು ತಮ್ಮ ಸ್ವಂತ ಬೆವರಿನಿಂದ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಅವರಿಗೆ ನನ್ನ ಮೇಲಿನ ಪೀತಿ ವಿಶ್ವಾಸ ಹಾಗೂ ನನ್ನ ತಾಯಿಯ ಮೇಲಿನ ಗೌರವದಿಂದ ಈ ಸಂಸ್ಥೆಗೆ ನನ್ನ ತಾಯಿಯ ಹೆಸರು ಇಟ್ಟಿದ್ದಾರೆ. ನನ್ನ ತಾಯಿಯ ಹೆಸರು ಇಟ್ಟಿರುವುದರಿಂದ ಒಳ್ಳೆಯ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.
ಸವಣೂರಿಗೆ ಇನ್ನಷ್ಟು ಒಳ್ಳೆಯ ಶಿಕ್ಷಣ ಸಂಸ್ಥೆಗಳು ಬರಬೇಕು. ಅತಿ ಹೆಚ್ಚು ಜನಸಂಖ್ಯೆ ಇರುವ ತಾಲೂಕುಗಳಲ್ಲಿ ಸವಣೂರು ತಾಲೂಕು ಒಂದು. ಇಲ್ಲಿಗೆ ಹಳ್ಳಿಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಇಲ್ಲಿಯ ಒಳ್ಳೆಯ ಶಿಕ್ಷಣವನ್ನು ಮಕ್ಕಳು ಪಡೆಯಬೇಕು. ಈ ಶಾಲೆಯಲ್ಲಿ ಹೈಸ್ಕೂಲ್ ಪೂರ್ಣವಾಗಿ ಪಿಯುಸಿ ಪೂರ್ಣವಾಗಬೇಕು. ಸಂಸ್ಥೆ ತನ್ನದೇ ಆದ ಸ್ವಂತ ಕಟ್ಟಡ ನಿರ್ಮಾಣ ಆಗಲಿ, ಅದಕ್ಕೆ ನನ್ನ ಬೆಂಬಲ ನೀಡುತ್ತೇನೆ. ಸವಣೂರಿನಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆ ಬರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಬೋಳಶೆಟ್ಟಿ, ರಾಜಶೇಖರ ಗುರುಪಾದಮಠ, ರಾಯಪ್ಪ, ಸುರೇಶ್ ನಾಡಿಗೇರ್, ಪಾಂಡು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಆರ್. ಪಾಟೀಲ್, ಗಂಗಣ್ಣ ಸಾತಣ್ಣವರ ಹಾಗೂ ಸುರೇಶ್ ಪಾಟೀಲ್ ಪಾಲ್ಗೊಂಡಿದ್ದರು.