
ಹಾವೇರಿ: ರಾಜಕೀಯದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಪುತ್ರ, ದರ್ಶನ ಲಮಾಣಿ ಅವರು ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಜಿಲ್ಲಾ ಪಂಚಾಯತಿ,ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ, ಸಚಿವರಾಗಿ, ಉಪಸಭಾಪತಿಯಾಗಿರುವ ರುದ್ರಪ್ಪ ಲಮಾಣಿ ಅವರು ಪುತ್ರ ದರ್ಶನ ಲಮಾಣಿ ಅವರು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕಾರಣಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ.
ತಂದೆಯಂತೆ ಸಂಕಷ್ಟಕ್ಕೆ ಸ್ಪಂದಿಸುವ ದರ್ಶನ:
ದರ್ಶನ ಲಮಾಣಿ ಪತ್ರಿಕೋದ್ಯಮದಲ್ಲಿ ಪದವೀಧರರಾಗಿದ್ದು, ಸದ್ಯ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಇವರು ಕೂಡ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಕ್ರೀಡೆ,ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ದರ್ಶನ ಅವರು ಕಾರವಾರ ಹಾಕಿ ಕ್ಲಬ್ ಅಧ್ಯಕ್ಷರಾಗಿ ಕ್ರೀಡಾಪಟುಗಳ ಪಾಲಿಗೆ ಪಾಲಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ ದರ್ಶನ ಆ್ಯಂಡ್ ಟೀಂ:
2023 ರ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿಯಿಂದ ಸ್ಪರ್ಧಿಸಿದ್ದ ತಂದೆ ರುದ್ರಪ್ಪ ಲಮಾಣಿ ಅವರ ಗೆಲುವಿಗೆ ಹಗಲಿರುಳ ಶ್ರಮಿಸಿದ ದರ್ಶನ ಅವರು, ಜಿಲ್ಲೆಯ ಯುವ ಜನತೆಯನ್ನು ಸಂಘಟಿಸಿ ಬೇರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಲು ಪಕ್ಷಕ್ಕೆ ಶ್ರಮಿಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಮತಗಳ ಬರಲು ಪ್ರಮುಖ ಪಾತ್ರ ವಹಿಸಿದ್ದರು. ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಶಿಗ್ಗಾವಿ ಉಪ ಚುನಾವಣೆ ಹೆಚ್ಚು ಯುವಕರನ್ನು ಸಂಘಟಿಸಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸಿದ್ದಾರೆ.