ರಟ್ಟಿಹಳ್ಳಿ : ರಟ್ಟಿಹಳ್ಳಿ ತಾಲೂಕಿನ ತುಂಗಾ ಮೇಲ್ದಂಡೆ ಕಾಲುವೆಗೆ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಶಾಸಕ ಯು.ಬಿ.ಬಣಕಾರ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಅವರು ಬಾಗಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು,ಕಳೆದ ವರ್ಷ ಬದರಿಂದ ಜಿಲ್ಲೆಯ ರೈತರು ಕಂಗೇಟ್ಟಿದ್ದರು. ಈ ಬಾರಿ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಜೊತೆಗೆ ಜಿಲ್ಲೆಯ ವರದಾ,ಕುಮಧ್ವತಿ,ಧರ್ಮಾ, ನದಿಗಳು ತುಂಬಿ ಹರಿಯುತ್ತಿವೆ. ಇದೇ ವೇಳೆ ನಾಲೆಗಳಿಗೆ ನೀರು ಬಿಡಲಾಗಿದೆ. ತುಂಗಾ ಮೇಲ್ದಂಡೆ ಕಾಲುವೆಗಳಿಗೆ ನೀರು ಬಿಡಲಾಗಿದೆ. ಇದರಿಂದ ಸಾವಿರಾರು ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಈ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಬಂದಿದೆ. ಅದಕ್ಕಾಗಿ ಬಾಗಿನ ಅರ್ಪಣೆ ಮಾಡಲಾಗಿದೆ ಎಂದರು.
ಈ ಸಮಯದಲ್ಲಿ ಪಿ.ಡಿ.ಬಸನಗೌಡ್ರ, ವಾಸಣ್ಣ ದ್ಯಾವಕ್ಕಳವರ, ರವಿ ಮುದಿಯಪ್ಪನವರ,ಮಗೇಶ ಗುಬ್ಬಿ, ಹನುಮಂತ ಭರಮಣ್ಣನವರ,ಮಂಜು ತಂಬಾಕದ,ರಮೇಶ ಮಡಿವಾಳರ,ಷಣುಖಯ್ಯ ಮಳ್ಳಿಮಠ, ಅನ್ನಪೂರ್ಣ ಬಣಕಾರ,ವಿಜಯ ಬಂಗೇರಾ,ಸುಜಾತಾ ಬಳೂಲ,ಶಶಿಕಲಾ ಹಾದ್ರಿಹಳ್ಳಿ,ಸುನೀತಾ ದ್ಯಾವಕ್ಕಳ್ಳವರ, ನಾಗರಾಜ ಕೊಣನತಲಿ,ಈರನಗೌಡ ಪ್ಯಾಟೀಗೌಡ್ರ,ಕಂಟಾಧರ ಅಂಗಡಿ,ನಿಂಗಪ್ಪ ಚಳಗೇರಿ, ಸಿದ್ದು ನೇರೆಗೌಡ್ರ,ಜಗದೀಶ ಕೋಟಿಹಾಳ ಸೇರಿದಂತೆ ನೂರಾರು ಜನರು ಹಾಜರಿದ್ದರು.