ಹಾವೇರಿ : ಮೌಢ್ಯ ನಿವಾರಣೆಗೆ ವಿಶಿಷ್ಟ ಪ್ರಯತ್ನ: ಅಂತ್ಯಕ್ರಿಯೆ ವೇಳೆ ಸ್ಮಶಾನದಲ್ಲಿ ಅಡುಗೆ ತಯಾರಿಸಿ ಊಟ ಮಾಡಿದ ಘಟನೆ ರಾಣೆಬೇನ್ನೂರು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.ಮಾನವ ಬಂಧುತ್ವ ವೇದಿಕೆಯಿಂದ ಮೌಢ್ಯತೆ ನಿವಾರಣೆಗೆ ವಿಶಿಷ್ಟ ಪ್ರಯತ್ನ ಮಾಡಲಾಗಿದ್ದು,ಮೃತದೇಹ ಸುಡುವ ಸ್ಥಳದಲ್ಲದೆ ಅನ್ನ ಸಾಂಭಾರು ಮಾಡಿ ಊಟ ಮಾಡಲಾಗಿದೆ.ಲಕ್ಷ್ಮಪ್ಪ ಮುಷ್ಟೂರುನಾಯ್ಕರ(73)ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಬಂದವರಿಗೂ ಸ್ಮಶಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.ಮೃತದೇಹಕ್ಕೆ ಅಗ್ನಿಸ್ಪರ್ಷ ಮಾಡಿದ ವೇಳೆಯೆ ಅನ್ನ ಸಾಂಭಾರ ತಯಾರಿಸಿ ಊಟ ಮಾಡಲಾಗಿದೆ.ರಾಣೇಬೆನ್ನೂರು ಮಾನವ ಬಂಧುತ್ವ ವೇದಿಕೆಯ ತಾಲೂಕು ಘಟಕದಿಂದ ವಿಶಿಷ್ಟ ಪ್ರಯತ್ನ ನಡೆಸುವ ಮೂಲಕ ಸ್ಮಶಾನದಲ್ಲಿ ಊಟ ಮಾಡುವುದರಿಂದ ಏನೂ ಆಗುವುದಿಲ್ಲ ಎಂಬ ಸಂದೇಶ ನೀಡಲಾಗಿದೆ.ಅಂತ್ಯಕ್ರಿಯೆಗೆ ಆಗಮಿಸಿದ ಬಂಧು-ಬಾಂದವರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.ಮೃತರ ಕುಟುಂಬದವರ ದುಃಖ ನಿವಾರಣೆಗೆ ಸ್ಮಶಾನದಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.ರೈತ ಮುಖಂಡ ರವೀಂದ್ರಗೌಡ ಪಾಟೀಲ ನೇತೃತ್ವದಲ್ಲಿ ವಿಶಿಷ್ಟ ಪ್ರಯತ್ನ ನಡೆಸಲಾಗಿದೆ.
Check Also
Close