ಹಾವೇರಿ: ಹಾವೇರಿ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ನಿರೀಕ್ಷೆಯಂತೆ ಬಹುಮತ ಇದ್ದರೂ, ಅಧಿಕಾರ ಕಳೆದುಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಕಾಂಗ್ರೆಸ್‌ನವರೆ ಶತ್ರುಗಳು ಎಂಬುದನ್ನು ಸಾಬೀತು ಪಡಿಸಿದರು.ದೇಶದ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಪಕ್ಷ ಪಕ್ಷೇತರರಿಗೆ ಜೈ ಎನ್ನುವ ಮೂಲಕ ತನ್ನ ಉದ್ದೇಶವನ್ನು ಸಾಕಾರಗೊಳಿಸಿದೆ.
ಹಾವೇರಿ ನಗರಸಭೆ ಅಧ್ಯಕ್ಷ & ಉಪಾಧ್ಯಕ್ಷರ ಚುನಾವಣೆ ಜಿದ್ದಾಜಿದ್ದಿ ಜೋರಾಗಿತ್ತು. ನಾಡಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕೈ ನಾಯಕರಿಗೆ ಹಾವೇರಿ ನಗರಸಭೆ ಚುನಾವಣೆಯಲ್ಲಿ ಭಾರಿ ಮುಖ ಭಂಗವಾಗಿದೆ. ಬಹುಮತ ಇದ್ದರೂ ಆಂತರಿಕ ಬೇಗುದಿಯಿಂದ ಕಾಂಗ್ರೆಸ್‌ಗೆ ಅಧಿಕಾರದ ಗದ್ದುಗೆ ಕೈ ತಪ್ಪಿದೆ. ಕಾಂಗ್ರೆಸ್ ಒಳ ಏಟಿನ ಮುಂಸೂಚನೆ ಅರಿತ ಬಿಜೆಪಿ ಪಕ್ಷೇತರರಿಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಚೆಕ್ ಮೆಟ್ ನೀಡಿದೆ.
ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ ಕೈ ನಾಯಕರಿಗೆ ಹಾವೇರಿಯಲ್ಲಿ ಭಾರಿ ಮುಖ ಭಂಗವಾಗಿದೆ. 6 ವಿಧಾನಸಭೆ ಕ್ಷೇತ್ರದ ಪೈಕಿ 5 ಕ್ಷೇತ್ರದಲ್ಲಿ ಬಹುಮತಗಳಿಂದ ಗೆದ್ದ ‘ಕೈ’ ಭದ್ರ ಕೋಟೆಯಾಗಿದೆ. ಆದ್ರೆ ಈ ಬಾರಿ ಹಾವೇರಿ ನಗರಸಭೆ ಚುನಾವಣೆಯಲ್ಲಿ ಕಮಲ ಅರಳಿ ಕಿಲಕಿಲ ಅನ್ನುತ್ತಿದೆ. ಹೌದು, ಈ ಹಿಂದೆ ಹಾವೇರಿ ನಗರಸಭೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಸೇರಿತ್ತು. ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹಾವೇರಿ ನಗರಸಭೆ ಪಟ್ಟ ದೊರೆಯುತ್ತೆ ಅಂತ ಕೈ ನಾಯಕರು ಭರವಸೆಯಲ್ಲಿ ಇದ್ದರು. ಆದ್ರೆ ಕೈ ನಾಯಕರ ಭರವಸೆಗೆ ಕೈ ಸದಸ್ಯರುರೇ ಶಾಕ್ ನೀಡಿದ್ದಾರೆ. ಹೌದು ಹಾವೇರಿ ನಗರಸಭೆ ಯಲ್ಲಿ ಒಟ್ಟು ಸದಸ್ಯರ ಸಂಖ್ಯಾಬಲ 34 ಆಗಿದೆ. ಇದರಲ್ಲಿ ಬಿಜೆಪಿ 14 ಸದಸ್ಯರು ಹೊಂದಿದ್ದು, 16 ಸದಸ್ಯರು ಕಾಂಗ್ರೆಸ್ ನವರೇ ಇದ್ದರು. ಇನ್ನುಳಿದ 4 ಸದಸ್ಯರು ಪಕ್ಷತರು ಇದ್ದರು. ಆದ್ರೆ, ಕಾಂಗ್ರೇಸ್ ನ 6 ಸದಸ್ಯರು ನಗರಸಭೆ ಚುನಾವಣೆ ವೇಳೆ ಗೈರಾದರು.ಇದನ್ನ ಬಂಡವಾಳ ಮಾಡಿಕೊಂಡ ಪಕ್ಷೇತರ ಸದಸ್ಯರು ಬಿಜೆಪಿಯನ್ನು ಬೆಂಬಲಿಸಿ
ಅಧ್ಯಕ್ಷ & ಉಪಾಧ್ಯಕ್ಷ ಪಟ್ಟವನ್ನು ದಕ್ಕಿಸಿಕೊಂಡರು.
ಹಾವೇರಿ ನಗರಸಭೆಯಲ್ಲಿ 34 ಸದಸ್ಯರ ಸಂಖ್ಯೆ ಹೊಂದಿದದ್ದು. ಇದರಲ್ಲಿ
28 ಸದಸ್ಯರು ಮಾತ್ರ ಇಂದು ಚುನಾವಣೆ ವೇಳೆ ಹಾಜರಿದ್ದರು. ಇತ್ತ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯರ ಸಲೀಂ ಅಹ್ಮದ & ಉಪಸಭಾಪತಿ ರುದ್ರಪ್ಪ ಲಮಾಣಿ ಹಾಜರಿದ್ದು ಮತ ಚಲಾಯಿಸಿದರು. ಈ ವೇಳೆ ಬಿಜೆಪಿ ಬೆಂಬಲಿತ ಪಕ್ಷೇತರವಾಗಿ ಆಯ್ಕೆಯಾಗಿದ್ದ ಶಶಿಕಲಾ ರಾಮು ಮಾಳಗಿ 17 ಮತ ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಅವರು ಕೇವಲ 11 ಮತ ಪಡೆದು ಪರಾಜಿತರಾದರು. ಇನ್ನು ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸಾತೀನಹಳ್ಳಿ ಆಯ್ಕೆಯಾದರು.
ಒಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್ ಮತ್ತೆ ಹಾವೇರಿ ನಗರಸಭೆ ಅಧ್ಯಕ್ಷ ಪಟ್ಟಕ್ಕೆ ಕಾದು ಕುತಿತ್ತು. ಕೆಲ ಕೈ ನಾಯಕರ ಎಡವಟ್ಟಿನಿಂದ ಬಿಜೆಪಿ ತೆಕ್ಕೆಗೆ ಹಾವೇರಿ ನಗರಸಭೆ ಸೇರಿದ್ದು ಮಾತ್ರ ಸುಳ್ಳಲ್ಲ. ಇನ್ನು ಅಧ್ಯಕ್ಷ ಪಟ್ಟ ಸಿಗದೆ ಪರಿಷತ್ ಸದಸ್ಯ ಸಲೀ ಅಹ್ಮದ & ಸಭಾಧ್ಯಕ್ಷ ರುದ್ರಪ್ಪ ಲಮಾಣಿ ನಿರಾಶರಾಗಿ ಹೊರ ನಡೆದರು. ಅದ್ಹೇನೆ ಇರಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾವೇರಿ ನಗರಕ್ಕೆ ಉತ್ತಮ ಅಭಿವೃದ್ಧಿ ಕೆಲಸ ಮಾಡಲಿ ಎಂಬುದ ಜನರ ಆಶೆಯ.