DistrictLatestNewsPoliticsState

ನಾನು ರಾಜ್ಯಾಧ್ಯಕ್ಷದ ಸ್ಥಾನದ ಆಕಾಂಕ್ಷಿಯಲ್ಲ: ಬಸವರಾಜ ಬೊಮ್ಮಾಯಿಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ: ನಾನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬಂದಿದೆ ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ನಿಮ್ಮ ಹೆಸರು ಕೇಳಿ ಬರುತ್ತದೆ. ಅದೆಲ್ಲಾ ಏನೂ ಮಹತ್ವ ಅಲ್ಲ, ನಾನೇನು ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ ಎಂದರು.
ಪಕ್ಷ ಸಂಘಟನೆಯಲ್ಲಿ ಎಲ್ಲರಿಗೂ ಶಕ್ತಿಯಿದೆ. ಎಲ್ಲರೂ ಕೂಡಿದಾಗಲೇ ಒಗ್ಗಟ್ಟಿನ ಶಕ್ತಿ ಆಗುತ್ತದೆ. ಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲ. ಎಲ್ಲರೂ ಸೇರಿ ಮಾಡಿದಾಗ ಶಕ್ತಿ ಬರುತ್ತದೆ. ಬಿಜೆಪಿ ಜನಮಾನಸದಲ್ಲಿ ಇರುವಂತ ಪಕ್ಷ. ಅದಕ್ಕಾಗಿ ಒಮ್ಮೊಮ್ಮೆ ಪೈಪೋಟಿ ಇರುತ್ತದೆ. ಇಂತಹ ಸಮಯದಲ್ಲಿ ಸೌಹಾರ್ದತೆಯಿಂದ ಪಕ್ಷದ ಹಿರಿಯರು ಮಾರ್ಗದರ್ಶನ ‌ಮಾಡುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗುತ್ತದೆ. ಮೇಲಿಂದ ಶಿವರಾಜ ಸಿಂಗ್ ಚೌಹಾಣ್ ಬರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಸೌಹಾರ್ದತೆಯಿಂದ ಚುನಾವಣೆ ಆಗುತ್ತದೆ ಎಂದು ಹೇಳಿದರು.

ಸೌಹಾರ್ದಯತ ಬಗೆ ಹರಿಸುವ ಪ್ರಯತ್ನ:
ಮಾಜಿ ಸಚಿವ ಶ್ರೀರಾಮೂಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವೆ ನಡೆಯುತ್ತಿರುವ ವಾಕ್ ಸಮರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮೂಲು ಹಾಗೂ ರೆಡ್ಡಿ ಅವರು ನಮಗಿಂತ ನಿಮಗಿಂತಾ ಹಳೆಯ, ಆತ್ಮೀಯ ಸ್ನೇಹಿತರು
ನಮ್ಮ ಆತ್ಮೀಯ ಸ್ನೇಹಿತರಲ್ಲಿ ಒಮ್ಮೊಮ್ಮೆ ಗ್ಯಾಪ್ ಬರುತ್ತದೆ. ಸ್ನೇಹ ಅಂತಿಮವಾಗಿ ಗೆಲ್ಲುತ್ತದೆ. ಇದೆಲ್ಲಾ ಸರಿಯಾಗುತ್ತದೆ. ಜನಾರ್ದನ ರೆಡ್ಡಿ ಹತ್ತಿರ ಮಾತನಾಡುವೆ. ಪಕ್ಷದ ದೃಷ್ಟಿಯಿಂದ ಇಬ್ಬರ ಹತ್ತಿರ ಸೌಹಾರ್ದ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial