ಹಾವೇರಿ: ಕಳೆದ ಒಂದು ತಿಂಗಳನಿಂದ ಮಂಗನ ಹಾವಳಿಗೆ ಜನ ಬೇಸತ್ತಗೊಂಡಿರುವ ಘಟನೆ ಹಿರೆಕೇರೂರು ತಾಲೂಕಿನ ಯತ್ತಿನಹಳ್ಳಿ ತಾಂಡದಲ್ಲಿ ನಡೆದಿದೆ.
ಕಾಡಿನಿಂದ ನಾಡಿಗೆ ಬಂದ ವಾನರ ಸೇನೆಯಿಂದ ಜನರ ಮೇಲೆ ದಾಳಿಯಾಗಿದೆ.ಹಲವು ಜನರ ಮೇಲೆ ದಾಳಿ ಮಾಡಿರುವ ಮಂಗಗಳಿಂದ ಜನರು ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ.ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬರದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ಆಕ್ರೋಕ ವ್ಯಕ್ತಪಡಿಸುತ್ತಿದ್ದಾರೆ. ವಾನರ ಸೇನೆ ಸ್ಥಳಾಂತರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.