
ಹಾವೇರಿ: ಜಿಲ್ಲೆಯ ಹೆಸ್ಕಾಂ ವ್ಯಾಪ್ತಿಗೆ ಬರುವ ಗ್ರೇಡಗಳ ಸುಧಾರಣೆ ಮತ್ತು ನಿರ್ವಹಣೆ ಜೊತೆಗೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ನೀಡಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ ಅಜೀಮಪೀರ ಎಸ್ ಖಾದ್ರಿ ಹೇಳಿದರು.
ನಗರದ ಹೆಸ್ಕಾಂ ವೃತ್ತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅರ್ಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಜಿಲ್ಲೆಗೆ ಶೀಘ್ರದಲ್ಲಿ ಇಂಧನ ಸಚಿವರು ಭೇಟಿ ನೀಡಲಿದ್ದು ಅದರ ಪ್ರಯುಕ್ತ ಹಾವೇರಿ ವಿಭಾಗದ ಹೆಸ್ಕಾಂ ಅಧಿಕಾರಿಗಳ ಪ್ರಗತಿ ಪರಿಶೀಲನ ಪೂರ್ವಭಾವಿ ಸಭೆ ನಡೆಸಿ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಒಂದು 110 ಕೆ ವಿಯ 17 ಗ್ರೀಡ್ ಮತ್ತು 33 ಕೆವಿಯ 32 ಗ್ರಿಡಗಳಿದ್ದು ಇವುಗಳ ಸೂಕ್ತ ನಿರ್ವಹಣೆಯೊಂದಿಗೆ ಈಗಿರುವ 33 ಕೆ ವಿ ಗ್ರೀಡ್ ಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಜಿಲ್ಲೆಯ ಭವಿಷ್ಯವನ್ನು ಉದ್ದೇಶವಾಗಿತ್ತುಕೊಂಡು ಹೊಸದಾಗಿ 110 ಕೆವಿ ಗ್ರೀಡ್ ಅಳವಡಿಸಲು ಪ್ರೇಯತ್ನಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತಲೂ ಹೆಚ್ಚಿನ ಮಳೆ ಆಗಿದ್ದು, ಅಂತರ್ಜಲ ಮಟ್ಟವುಕೂಡ ಹೆಚ್ಚಾಗಿರುತ್ತದೆ ಇದರಿಂದ ಜಿಲ್ಲೆಗೆ ಹೆಚ್ಚಿನ ಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕಾಗಿರುತ್ತದೆ ಹಾಗೂ ಮುಂಬರುವ ಬೇಸಿಗೆಯಲ್ಲಿ ಯಾವುದೇ ಅನಾನುಕೂಲ ಆಗದೇ ಇರುವ ಹಾಗೆ ನೋಡಿಕೊಳ್ಳಲು ಈಗಿನಿಂದಲೇ ಸಕಲ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಹೆಸ್ಕಾಂ ಇಲಾಖೆಯು ಮುಖ್ಯವಾಗಿ ಪವರ್ ಮೆನ್ ಮೇಲೆ ಅವಲಂಬಿತವಾಗಿರುತ್ತದೆ ಹೀಗಾಗಿ ಪವರ್ ಮೆನ್ ಗಳ ಹಿತದೃಷ್ಟಿ ಕಾಪಾಡಿವುದು ನಮ್ಮ ಮುಖ್ಯ ಉದ್ದೇಶವಾಗಿದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಅವರನ್ನು ಪ್ರೋತ್ಸಾಹಿಸುವುದು ನಮ್ಮ ಮುಖ್ಯ ಜವಾಬ್ದಾರಿಯಾಗಿದೆ ಎಂದರು ಈಗಾಗಲೇ ಸರ್ಕಾರ ಪವರ್ ಮೆನ್ ಗಳ ಆರೋಗ್ಯ ಹಿತದೃಷ್ಟಿ ಕಾಯಲು 5 ಲಕ್ಷ ವರೆಗಿನ ಕ್ಯಾಶ್ ಲೆಸ್ ಚಿಕಿತ್ಸೆ ನೀಡಲು ಆದೇಶಿಸಿದೆ ಹಾಗೆಯೇ ಪವರ ಮೆನ್ ಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿಲಾಗುವುದು ಎಂದರು.
ಜಿಲ್ಲೆಯಲ್ಲಿ ವಿವಿಧ ಸರಕಾರಿ ಇಲಾಖೆಗಳು ಉಳಿಸಿಕೊಂಡಿರುವ 450 ಕೋಟಿ ಮೊತ್ತದ ಬಾಕಿ ವಿದ್ಯುತ್ ಬಿಲ್ ಪಾವತಿಗೆ ಕ್ರಮ ವಹಿಸಲಾಗಿದೆ ಹಾಗೆ ಜಿಲ್ಲೆಯಲ್ಲಿ ಒಟ್ಟು 4,13,775 ಗೃಹ ಜ್ಯೋತಿ ಗ್ರಾಹಕರಿದ್ದು, 3,76,271 ಫಲಾನುಭವಿಗಳಿದ್ದಾರೆ ಜಿಲ್ಲೆಯು ಪ್ರತಿಶತ 95.77 ರಷ್ಟು ಪ್ರಗತಿ ಸಾಧಿಸಿದೆ ಉಳಿದ 4.23 ಫಲಾನುಭವಿಗಳು ಗೃಹ ಜ್ಯೋತಿ ಸೌಲಭ್ಯ ಪಡೆಯಲು ವಿಫಲರಾಗಿದ್ದಾರೆ ಆಗಿರುವ ತೊಡಕುಗಳನ್ನು ಪರಿಹರಿಸಿ ಉಳಿದಿರುವ ಫಲನಿಭಾವಿಗಳಿಗೂ ಕೂಡ ಗೃಹ ಜ್ಯೋತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.