ಹಾವೇರಿ : ಮಹಾತ್ಮ ಗಾಂಧಿಜೀ ಜನ್ಮದಿನದ ಅಂಗವಾಗಿ ಹಾವೇರಿಯಲ್ಲಿ ಆರೋಗ್ಯ ಇಲಾಖೆ ಸ್ವಚ್ಚತಾ ಅಭಿಯಾನ ನಡೆಸಿದರು. ಹಾವೇರಿಯ ಬಸವೇಶ್ವರ ನಗರದಲ್ಲಿ ನೂರಾರು ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯರು ಸೇರಿದಂತೆ ಆಶಾ ಕಾರ್ಯಕರ್ತೆಯರು ಕೈಯಲ್ಲಿ ಪೊರಕೆ ಹಿಡಿದು ಕಸಗೂಡಿಸುವ ಕಾರ್ಯವನ್ನ ಮಾಡಿದರು. ಇನ್ನು ನಮ್ಮ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಚತೆಯಿಂದ ಇಟ್ಟುಕೊಳ್ಳಲು ಜಾಗೃತಿ ಮೂಡಿಸುವ ಕೆಲಸವನ್ನ ಮಾಡಿದರು. ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಡಿ.ಹೆಚ್.ಓ & ಆರೋಗ್ಯ ಇಲಾಖೆ ಶಸ್ತ್ರಚಿಕಿತ್ಸಕ ಹಾವನೂರು ಸೇರಿದಂತೆ ಎಲ್ಲಾ ವೈದ್ಯರು ಭಾಗವಹಿಸಿ, ಸ್ವಚ್ಚತಾ ಆಂದೋಲನ ಮಾಡಿದರು.