
ಹಾನಗಲ್: ಶಾಸಕ ಶ್ರೀನಿವಾಸ ಮಾನೆ ಅವರ 50 ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಆ.6 ರಂದು ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಳಗ್ಗೆ 9 ಗಂಟೆಗೆ ಇಲ್ಲಿನ ತಾಲೂಕ ಆಸ್ಪತ್ರೆಯಲ್ಲಿ ಟೀಂ ಆಪತ್ತಾಂದವ ಹಾಗೂ ಹುಬ್ಬಳ್ಳಿ ಕಿಮ್ಸ್
ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. 9.30 ಗಂಟೆಗೆ ಸ್ಥಳೀಯ
ಗುರುಭವನದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಅಕಾ ಕೇಂದ್ರದ ಆಶ್ರಯದಲ್ಲಿ
ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಭಾಷಣ
ಹಾಗೂ ದೇಶಭಕ್ತಿ ಗೀತೆಗಳ ಸ್ಪರ್ಧೆ ಆಯೋಜಿಸಲಾಗಿದೆ.10 ಗಂಟೆಗೆ ತಾಲೂಕಿನ 85 ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳ ಮೈದಾನಗಳಲ್ಲಿ ಏಕಕಾಲಕ್ಕೆ 5 ಸಾವಿರ ಸಸಿ ನೆಡುವ ಬೃಹತ್ ಅಭಿಯಾನ ನಡೆಯಲಿದೆ. ಆ. 7 ರಂದು ಬೆಳಗ್ಗೆ 10 ಗಂಟೆಗೆ ಸ್ಥಳೀಯ ಗುರುಭವನದಲ್ಲಿ ಉದ್ಯೋಗ ಸಮೃದ್ಧಿ ಕೇಂದ್ರ ಹಾಗೂ ದೇಶದ
ಪ್ರತಿಷ್ಠಿತ ಉದ್ಯೋಗ ಸಮೂಹವಾಗಿರುವ ಭಾರತ ವಿಕಾಸ ಗ್ರೂಪ್ (ಡಿವಿಜಿ) ಆಶ್ರಯದಲ್ಲಿ
ವಾಹನ ಚಾಲಕರ ನೇರ ನೇಮಕಾತಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಲೆಕ್ಟ್ರಿಕ್
ಬಸ್ ಓಡಿಸಲು ಹೆವಿ ಬ್ಯಾಡ್ಜ್ ಚಾಲನಾ ಪರವಾನಿಗೆ ಹೊಂದಿರುವ ಚಾಲಕರು
ಮೇಳದಲ್ಲಿ ಭಾಗವಹಿಸಿ, ಉದ್ಯೋಗಾವಕಾಶ ಪಡೆದುಕೊಳ್ಳಬಹುದಾಗಿದೆ.
ಜನ್ಮದಿನಾಚರಣಿ ಲೋಗೋ ಅನಾವರಣ:
ಶ್ರೀನಿವಾಸ ಮಾನೆ ಅವರ 50 ನೇ ಜನ್ಮದಿನಾಚರಣೆ ಅಂಗವಾಗಿ ವರ್ಷವಿಡೀ ತಾಲೂಕಿನಲ್ಲಿ
ನಾನಾ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಿರುವ
ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ರಾಣೀಬೆನ್ನೂರು
ಶಾಸಕ ಪ್ರಕಾಶ ಕೋಳಿವಾಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ
ಹಲವರು ಲೋಗೋ ಅನಾವರಣಗೊಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯರಾದ ಟಾಕನಗೌಡ
ಪಾಟೀಲ, ಖಾಜಾಮೊಹಿದ್ದೀನ ಜಮಾದಾರ ಸೇರಿದಂತೆ ಇನ್ನೂ ಹಲವರು ಇದ್ದರು.ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರ 50 ನೇ ಜನ್ಮದಿನಾಚರಣಿ ಹಿನ್ನೆಲೆಯಲ್ಲಿ ವರ್ಷವಿಡೀ ನಡೆಯುವ ಸಮಾಜೋಪಯೋಗಿ ಕಾರ್ಯಕ್ರಮಗಳ ಲೋಗೋ
ಅನಾವರಣಗೊಳಿಸಲಾಯಿತು.