
ಹಾನಗಲ್: ಹಾಡು ಹಗಲೆ ಮಹಿಳೆಯರನ್ನ ಟಾರ್ಗೇಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನ ಹಾನಗಲ್ ಪೊಲೀಸರು ಬಂದಿಸಿದ್ದಾರೆ.ಜಿಲ್ಲೆಯಲ್ಲಿ ಒಂಟಿ ಮಹಿಳೆಯರ ಸರವನ್ನ ಕಳ್ಳತನ ಮಾಡುತ್ತಿದ್ದ
ಐನಾತಿ ಕಳ್ಳನ ಹೆಡೆಮುರಿಕಟ್ಟಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಅಕ್ಕಿಆಲೂರಿನಲ್ಲಿ ಮಹಿಳೆಯ ಚಿನ್ನದ ಚೈನ್ ಕದ್ದು ಪರಾರಿಯಾಗಿದ್ದ ಕುಖ್ಯಾತ ಕಳ್ಳ.
ಹಾವೇರಿ, ಚಿತ್ರದುರ್ಗ, ಬಳ್ಳಾರಿ, ತುಮಕೂರು, ಗದಗ, ಜಿಲ್ಲೆಗಳಲ್ಲಿ ಕೊಲೆ, ಸುಲಿಗೆ, ಕಳ್ಳತನದ 34 ಕ್ಕೂ ಅಧಿಕ ಕೇಸ್ ನಲ್ಲಿ ಬಾಗಿಯಾಗಿದ್ದ ಕಳ್ಳನನ್ನು ಗುರುಪ್ರಸಾದ್ ಮರಾಠಿ ಎಂದು ತಿಳಿದು ಬಂದಿದೆ.ರಾಣಿಬೇನ್ನೂರು ನಲ್ಲಿ ಸ್ವಂತ ಅಣ್ಣನನ್ನೆ ಕೊಲೆ ಮಾಡಿ ಬೆಲ್ ಮೇಲೆ ಹೊರಗಿದ್ದ ಐನಾತಿ ಕಳ್ಳನ್ನಾಗಿದ್ದಾನೆ ಎಂದು ಹಾನಗಲ್ ಪೊಲೀಸ್ ಠಾಣೆಯ ಸಿಪಿಐ ಆಂಜನೇಯ, ಪಿಎಸ್‌ಐ ಸಂಪತ್ ಕುಮಾರ ತಿಳಿಸಿದ್ದಾರೆ.