ಹಾವೇರಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೈ ಕಾಲು ಕಟ್ಟಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾನಗಲ್ ತಾಲೂಕಿ ಆರೇಗೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.ಮಸ್ತಾಫಾ ಎನ್ನುವ ವ್ಯಕ್ತಿಯ ಕೈ ಕಾಲನ್ನ ಹಗ್ಗದಿಂದ ಕಟ್ಟಿ ಆರೋಪಿಗಳಾದ ಅಸ್ಲಂ ಜಾಫರ್ ಸಾಬ್ ಮುಜಾವರ್ , ಸಲೀಂ ಜಾಫರ್ ಸಾಬ್ ಮುಜಾವರ್ ಎಂಬುವವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಜಮೀನಿನಲ್ಲಿ ಹಾಕಿದ್ದ ಮಣ್ಣನ್ನ ತೆರವುಗೊಳಿಸಿ ಎಂದು ಮುಸ್ತಫಾ ಹೇಳಿದ್ದ.ಹಾಕಿರುವ ಮಣ್ಣ ತೆಗೆಯುವುದಿಲ್ಲ ಎಂದು ಎಂದು ಮನಸೊ ಇಚ್ಚೆ ಥಳಿಸಲಾಗಿದೆ.ಮುಸ್ತಫಾಗೆ ಸೇರಿದ ಹೊಲದಲ್ಲಿ ಹಾಕಿದ್ದ ಮಣ್ಣು ತೆರವುಗೊಳಿಸುವ ವಿಚಾರಕ್ಕೆ ಗಲಾಟೆಯಾಗಿದೆ.ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೈ ಕಾಲು ಕಟ್ಟಿ ಥಳಿಸುವ ವಿಡಿಯೋ ವೈರಲ್ ಆಗಿದೆ.