
ಹಾವೇರಿ: ಜಿಲ್ಲೆಯಾದ್ಯಂತ ದನದಾಯಿ ಮೈಕ್ರೋಫೈನಾನ್ಸ್ ಕಿರುಕುಳ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಮಹಿಳೆಯೊಬ್ಬರು ಮತ್ತೊಬ್ಬರಿಗೆ ಸಾಲ ತೆಗೆದುಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದ ಮಹಿಳೆ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ.ಸ್ಪಂದನ ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ಮನೆ ಬಿಟ್ಟು ಹಾನಗಲ್ ನ ಬೇರೆಬೊಬ್ಬರ ಮನೆಯಲ್ಲಿ ಮಹಿಳೆ ಪಡೆದಿದ್ದಾರೆ.ಕೊಪ್ಪರಸಿಕೊಪ್ಪದ ಸಾವಿತ್ರಮ್ಮ ವಡ್ಡರ, ತಮ್ಮ ಸಂಬಂಧಿಯೊಬ್ಬರಿಗೆ ತಮ್ಮ ಹೆಸರಿನಲ್ಲಿ ಸಾಲ ತೆಗೆದು ಕೊಟ್ಟಿದ್ದರು.ಸಾಲದ ಕಂತು ಕಟ್ಟದ ಪರಿಣಾಮ ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬಂದು ಹಣ ಕಟ್ಟುವಂತೆ ಪಿಡಿಸುತ್ತಿದ್ದರು.ಇದರಿಂದ ಬೇಸತ್ತ ಸಾವಿತ್ರಮ್ಮ ವಡ್ಡರ ಮನೆ ಬಿಟ್ಟು ಹಾನಗಲ್ ಪಟ್ಟಣದ ಸುಶೀಲಮ್ಮ ಪಾಟೀಲ್ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಮನೆ ಬಿಟ್ಟು ಬಂದು ಬೇರೆಯೊಂದು ಮನೆಯಲ್ಲಿ ಆಶ್ರಯ ಪಡೆದ ಮಾಹಿತಿ ತಿಳಿದು ಹಣ ಕಟ್ಟುವಂತೆ ಅಲ್ಲಿಯೂ ಬಂದು ಫೈನಾನ್ಸ್ ಸಿಬ್ಬಂದಿಗಳು ಕಾಟ ನೀಡುತ್ತಿದ್ದಾರೆ.ಮಹಿಳೆಯ ಸಂಕಷ್ಟ ಗೊತ್ತಾಗಿ ಸ್ಥಳಿಯರು ರಕ್ಷಣೆಗೆ ಮುಂದಾಗಿದ್ದಾರೆ.ಗಂಡನ ಕಳೆದುಕೊಂಡು ಒಬ್ಬಳೆ ಮಗಳ ಜೊತೆ ಬದುಕು ನಡೆಸುತ್ತಿರುವ ಸಾವಿತ್ರಮ್ಮ ವಡ್ಡರ ಅವರು, ಸಾಲಗಾರರ ಕಾಟಕ್ಕೆ ಪಾಳು ಮನೆಯಲ್ಲಿ ಬಂದು ವಾಸಮಾಡುತ್ತಿದ್ದ ಕಂಡು, ಸ್ಥಳಿಯರು ಕೇಳಿದಾಗ ಸಾಲದ ವಿಚಾರಕ್ಕೆ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದೆ ಅಂತಾ ಸಾವಿತ್ರಮ್ಮನ ಅಳಲು ತೋಡಿಕೊಂಡಿದ್ದಾರೆ.ಸಧ್ಯ ಹಾನಗಲ್ ಪಟ್ಟಣದ ಸುಶೀಲಮ್ಮ ಪಾಟೀಲ್ ಮನೆಯಲ್ಲಿ ಆಶ್ರಯ ಪಡೆದು ಜೀವನ ನಡೆಸುತ್ತಿರುವ ಸಾವಿತ್ರಿಮ್ಮ ವಡ್ಡರ. ಕಳೆದ ಒಂದು ವಾರದಿಂದ ಪಾಳು ಬಿದ್ದ ಮನೆಯಲ್ಲಿ ವಾಸವಾಗಿದ್ದಾರೆ.