ಹಾನಗಲ್ : ನಿರಂತರ ಮಳೆಗೆ ಮನೆ ಮೇಲ್ಚಾವಣೆ ಕುಸಿತ ಹಿನ್ನಲೆ ಕುಟುಂಬವೊಂದು ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾದ ಘಟನೆ ಹಾನಗಲ್ ತಾಲೂಕಿನ ಹರವಿ ಗ್ರಾಮದಲ್ಲಿ ನಡೆದಿದೆ.ನಡು ಮನೆಯಲ್ಲಿದ್ದ ಮಣ್ಣಿನ ಮೇಲ್ಚಾವಣೆಯ ಮಣ್ಣು ನಸುಕಿನ ಸಮಯದಲ್ಲಿ ಏಕಾಏಕಿ ಕುಸಿದಿದೆ.ಈ ವೇಳೆ ಅಲ್ಲಿಯೇ ಮಲಗುತ್ತಿದ್ದ ಕುಟುಂಬಸ್ಥರು ಕ್ಷಣ ಹೊತ್ತಿನಲ್ಲಿ ಅಪಾಯದಿಂದ ಪಾರಾಗಿದ್ದಾರೆ.