ಹಾನಗಲ್ :ತಾಲೂಕಿನ ಅಕ್ಕಿ ಆಲೂರಿನಲ್ಲಿ ಪ್ರವಾದಿ ಮಹ್ಮದ ಪೈಗಂಬರ್ ಅವರ ಜನ್ಮದಿನವಾದ ಜಶ್ನೆ ಈದ್ ಮಿಲಾದ ಹಬ್ಬವನ್ನು ಇಲ್ಲಿನ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಮಖಬೂಲಿಯಾ ಜಾಮಿಯಾ ಮಸೀದಿಯಲ್ಲಿ ಕೊನೆಗೊಂಡಿತು. ಮೆರವಣಿಗೆ ಉದ್ದಕ್ಕೂ ಪ್ರವಾದಿ ಮಹ್ಮದ ಪೈಗಂಬರ್ ಅವರ ಜೀವನ,ಸಂದೇಶಗಳ ಮೇಲೆ ಕವನಗಳನ್ನು ವಾಚಿಸಲಾಯಿತು.ಪೈಗಂಬರ್ ಮಹ್ಮದ ಅವರ ಸಂದೇಶಗಳನ್ನು ಸಾರುವ ಫಲಕಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.ಮೆರವಣಿಗೆ ಸಾಗಿದ ಮಾರ್ಗದಲ್ಲಿ ಅಲ್ಲಲ್ಲಿ ತಂಪು ಪಾನೀಯ ಹಾಗೂ ಸಿಹಿ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು. ಗೆಜ್ಜಿಹಳ್ಳಿ ಹೊರವಲಯದ ದಾರುಲ್ ಹುದಾ ಇಸ್ಲಾಮಿಯಾ ಆಫ ಕ್ಯಾಂಪಸ್ ವಿದ್ಯಾರ್ಥಿಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.ಪಟ್ಟಣದ ವಿವಿಧ ಮದರಸಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಗ್ರಾ.ಪಂ.ಅಧ್ಯಕ್ಷ ಮಖಬೂಲ ಅಹ್ಮದ ರುಸ್ತುಂಖಾನವರ, ಅಂಜುಮನ್ ಎ ಇಸ್ಲಾಂ ಸುನ್ನಿ ಹನಫಿ ಅಧ್ಯಕ್ಷ ಮೆಹಬೂಬ ಅಲಿ ಬ್ಯಾಡಗಿ,ಭೂ ನ್ಯಾಯ ಮಂಡಳಿ ಸದಸ್ಯ ಯಾಸೀರ ಅರಾಫತ್ ಮಕಾನದಾರ, ರಿಯಾಜ ಹಾವಣಗಿ, ಎ.ಎಚ್.ಹುಬ್ಬಳ್ಳಿ,ಮೌಲಾನಾ ಅಹ್ಮದ ಬಾಶಾ ಶೇಖಜಿ, ಮೌಲಾನಾ ರಫೈ ಬಾಶಾ,ಹಾಫಿಜ ನಿಸಾರ ಅಹ್ಮದ,ಖಾಜಾಮೊದೀನ ಅಣ್ಣಿಗೇರಿ, ಸಾಧಿಕ ಮಳಗಿ,ಜಹೀರ ಹಸನಾಬಾದಿ,ಅಬ್ದುಲ್ ಹಾಫಿಜ ಲಾಲಾನವರ,ಮುನೀರ ಬಾಳೂರ,ಮುಶ್ತಾಕ ಕಾರಡಗಿ,ಕಲೀಮುಲ್ಲಾ ಚನ್ನಾಪುರ,ಸಾಧಿಕ ಹಸನಾಬಾದಿ,ಮಹ್ಮದ ಖಾಜಿ,ಇಮ್ತಿಯಾಜ ಸಿಲಾರ,ಮಖಬೂಲಸಾಬ ಚಾವೂಸ,ಖಾಸಿಮ ಶಿಡೇನೂರ,ಅಲ್ತಾಫ ಅಹ್ಮದ ಅತ್ತಾರ,ಮಹೆದ್ದೀನ ಸೈಕಲ್ಗಾರ,ಇರ್ಫಾನ ಬಂಕಾಪುರ,ಅಬ್ದುಲ್ ರಹೀಮ ಮಕಾನದಾರ,ಸುಲೇಮಾನ ಶೇಖ,ನಸರುಲ್ಲಾ ಉಪ್ಪಣಸಿ ಸೇರಿದಂತೆ ಹಲವರು ಹಾಜರಿದ್ದರು.