ಹಾನಗಲ್: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಅಂಗವಾಗಿ ಆಚರಿಸುವ ಈದ-ಎ- ಮಿಲ್ಲಾದ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜದವರು ಓಣಿಗಳಲ್ಲಿ ಹಾಗೂ ಮಸೀದಿಗಳನ್ನು ವಿದ್ಯುತ್ ದೀಪದಿಂದ ಅಲಂಕರಿಸಿ ಸಂಭ್ರಮ ಪಟ್ಟರು ಪಟ್ಟಣವು ಇಂದು ಹಬ್ಬದ ವಾತಾವರಣದಿಂದ ಕಂಗೊಳಿಸುವಂತಿತ್ತು ಹಬ್ಬದ ಪ್ರಯುಕ್ತ ಸೋಮವಾರ ಮುಸ್ಲಿಂ ಬಾಂಧವರು ಬೃಹತ್ ಮೆರವಣಿಗೆ ಏರ್ಪಡಿಸಿದ್ದರು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಮೆರವಣಿಗೆಯು ಹಾನಗಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊರಟು ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು
ಮೆರವಣಿಗೆ ಉದ್ದಕ್ಕೂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶಗಳ ಮೇಲೆ ಕವನಗಳನ್ನು ವಾಚಿಸಲಾಯಿತು ಪೈಗಂಬರ್ ಮೊಹಮ್ಮದ್ ಅವರ ಸಂದೇಶಗಳನ್ನು ಸಾರುವ ಫಲಕಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು ಮೆರವಣಿಗೆ ಸಾಗಿದ ಮಾರ್ಗದಲ್ಲಿ ತಂಪು ಪಾನೀಯ ಹಾಗೂ ಸಿಹಿ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ. ಅಂಜುಮನ್ ಕಮಿಟಿ ಅಧ್ಯಕ್ಷರಾದ ನಜೀರ ಅಹಮದ್ ಸೌನೂರ್. ಬಶೀರ್ ಸರ್ವಿಕೆರಿ. ನಿಸಾರ್ ಪಾನುವಾಲೆ. ಸಲೀಂ ಮಿಟಾಯಿಗರ್. ಮುಸ್ತಾಕ್ ಸುತಾರ್. ಜಹೀರ್ ಸಿಡಿನೂರ್. ಜಹೀರ ಜಾಲೆಗಾರ್.ಇರ್ಫಾನ್ ಸೌದಾಗರ್ ಸಿಕಂದರ್ ವಾಲಿಕಾರ್ ಜಾಫರ್ ಬಾಳುರ ದುದ್ದು ಅಕ್ಕಿವಳ್ಳಿ. ಚಮನ್ ಸಾಬ್ ಕಿತ್ತೂರ್ ಬಾಬಾ ಜಾನ್ ಕೊಂಡವಾಡಿ ಜೈಲಾನಿ ಮುಂಡಗೋಡ್ ಇರ್ಫಾನ್ ಮಿಟಾಯಿಗರ್ ಖಾಲಿದ್ ಶೇಶಿಗೇರಿ ಸಾಧಿಕ್ ನಾಯಕ್ ಅಹಮದ್ ಗುತ್ತಲ್ ಮುಕುಲ್ ತಂಡೂರ್ ತನ್ವೀರ್ ಉಪ್ಪಿನ ನಾಸಿರ್ ಖಾಜಿ ಮುಂತಾದವರಿದ್ದರು.