ಹಾನಗಲ್ : ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಿರಗೋಡ್ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.
ಈ ವೇಳೆ ಜಿಲ್ಲಾ ವಕ್ಫ ಬೋರ್ಡ್ ಉಪಾಧ್ಯಕ್ಷ ಎಂ.ಎಂ.ಮುಲ್ಲಾ ಮಾತನಾಡಿ,ರಕ್ತದಾನದಿಂದ ಮನುಷ್ಯ ದೈಹಿಕ ಹಾಗೂ ಮಾನಸಿಕವಾಗಿ ಸದೃಢನಾಗುತ್ತಾನೆ. ರಕ್ತದಿಂದ ಮತ್ತೊಂದು ಜೀವ ಉಳಿಸಲು ಸಹಾಯವಾಗುತ್ತದೆ. ಪ್ರತಿಯೊಬ್ಬ ಯುವಕರು ರಕ್ತದಾನ ಮಾಡಬೇಕು. ರಕ್ತ ದಾನದ ಮನೋಭಾವನೆ ಬೆಳೆಸುವ ಕರ್ನಾಟಕ ಮುಸ್ಲಿಂ ಯೂನಿಯನ್ ಹಾಗೂ ಆಶಿಕಿ ಮುಸ್ತಫ ಯಂಗ್ ಕಮಿಟಿ ಮುಂದಾಗಿದ್ದು ಒಳ್ಳೆಯ ವಿಚಾರ ಎಂದರು.
ರಕ್ತದಾನ ಶಿಬಿರದಲ್ಲಿ ಸುಮಾರು 55 ಯುವಕರು ರಕ್ತದಾನ ಮಾಡಿ ಪ್ರವಾದಿ ಮೊಹಮ್ಮದ್ ಪೈಗಂಬರರ ಜನ್ಮ ದಿನವಾದ ಈದ್ ಮಿಲಾದ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಯುವಕರಾದ ಖಾಜಾಸಾಬ್ ಬನವಾಸಿ ಅಬ್ದುಲ್ ಖಾದರ್ ಚಿಕ್ಕೇರಿ ಸಿರಾಜ್ ಚಿಕ್ಕೇರಿ ಶಂಸುದ್ದೀನ್ ನಾಲಬಂದ್ ಅಲ್ತಾಫ್ ಮಾಲಾಪುರ್ ಇರ್ಫಾನ್ ಹಿರಳ್ಳಿ ದಾದಾಪೀರ್ ಸಿಕ್ಕಲ್ಗರ್ ನಿಯಾಜ್ ಬೆಲ್ಲದ್ ಹಾಗೂ ಮುಂತಾದ ಯುವಕರು ಹಾಜರಿದ್ದರು.