ಹಾನಗಲ್: ತಾಲೂಕಿನ ಆಡೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಓಸಿ,ಮಟ್ಕಾ ಜೂಜಾಟ ಹೆಚ್ಚಾಗಿ ನಡೆಯುತ್ತಿದ್ದು,ವಿಷಯ ತಿಳಿದು ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ತಿಳವಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ತಾಲೂಕಿನ ಘಾಳಪೂಜಿ ಗ್ರಾಮದ ಹನುಮಂತಪ್ಪ ರಾಮಪ್ಪ ದೇವರಮನಿ, ಆಡೂರು ಗ್ರಾಮದ ನಾಗರಾಜ ಫಕ್ಕೀರಪ್ಪ ಆರೇರ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಬಂದಿತ ಓರ್ವ ವ್ಯಕ್ತಿ ತಿಳವಳಿ ಗ್ರಾಮದಲ್ಲಿ ಒಂದು ರೂಪಾಯಿಗೆ 80 ರೂ ನೀಡುವುದಾಗಿ ಜನರಿಗೆ ಪುಸಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಇನೋರ್ವ ವ್ಯಕ್ತಿ ಆಡೂರು ಗ್ರಾಮದಲ್ಲಿ ಓಸಿ ಬರೆಸುತ್ತಿದ್ದ ಎಂದು ತಿಳಿದು ಬಂದಿದೆ.
ಅಲ್ಲದೇ, ಜಿಲ್ಲೆಯ ಹಲವು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಓಸಿ,ಮಟಕಾ,ಇಸ್ಪೀಟುನಂತಹ ಜೂಜಾಟಗಳು ಹೆಚ್ಚಾಗಿ ನಡೆಯುತ್ತಿವೆ.ಇದರಿಂದ ಹಲವು ಕುಟುಂಬಗಳ ಬೀದಿಗೆ ಬಿಳುವಂತ ಘಟನೆಗಳು ಹೆಚ್ಚಾಗಿ ಕಂಡುಬಂದಿದೆ. ಪೊಲೀಸರು ಈಗ ದಾಳಿ ಪ್ರಕರಣ ದಾಖಲಿಸಿಕೊಂಡಂತೆ ಉಳಿದ ಗ್ರಾಮದಲ್ಲಿ ದಾಳಿ ನಡೆಸಿ ಓಸಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.