DistrictHaveriLatestState

ಅಂಬೇಡ್ಕರ್ ಕುರಿತು ಅಮಿತ ಷಾ ಹೇಳಿಕೆಗೆ ತೀವ್ರ ಖಂಡನೆ

ಹಾನಗಲ್ : ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿ ಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು” ಎಂದು
ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ರಾಜ್ಯ ಸಭೆಯಲ್ಲಿ ಹೇಳಿದ್ದು ಅವರ ಈ ಅಸೂಕ್ಷ್ಮ ವಾದ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹಾನಗಲ್ ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಿವು ಭದ್ರವಾತಿ ಹೇಳಿದ್ದಾರೆ.

ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಇದ್ದ ಪರಿಸ್ಥಿತಿ ಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ. ಇದು ಸಮಸ್ತ ಜನರಿಗೆ ಗೊತ್ತು. ಆದರೆ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ದೂರದೃಷ್ಟಿಯ ಮೂಲಕ ಪ್ರತಿ ದಿನ ವೂ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ಮತ್ತವರ
ಸಂವಿಧಾನ ಎಂಬುದನ್ನು ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ. ಭಾರತದ ಶೋಷಿತ ತಳಸಮುದಾಯಗಳ ತಾರತಮ್ಯ ನೊವನ್ನು ಅನುಭವಿಸಿದ ನಮ್ಮ
ಸಮುದಾಯದ, ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಬೇರೆಯವರ ಹೆಸರನ್ನು ಹೇಳುತ್ತಾ ಇಷ್ಟೊತ್ತಿಗೆ ಅವರೆಲ್ಲರೂ ಅದು ಗತಿಯಾಗುತ್ತಿತ್ತು. ಸಂವಿಧಾನ ಶಿಲ್ಪಿ ಡಾ| ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೀನ ಬಂಡ ಧೈರ್ಯ ತೋರುತ್ತಿರುವ ಅಮಿತ್ ಷಾ ಅವರು ಸಮಸ್ತ
ಭಾರತೀಯರ ಮುಂದೆ ಕ್ಷಮೆಯಾಚಿಸಿ ಬೇಕು ಇಲ್ಲಾ ಅಂದ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಈ ಮೂಲಕ ನಾನು ಆಗ್ರಹಿಸುತ್ತೇನೆ.ಬಾಬಾಸಾಹೇಬ ಅಂಬೇಡ್ಕರರು ಬರೆದ ಸಂವಿಧಾನ ಅಡಿಯಲ್ಲಿ ಚುನಾ
ವಣೆಯಲ್ಲಿ ನಿಂತು ಅಧಿಕಾರ ವನ್ನು ಪಡೆದುಕೊಂಡು ಅವರಿಗೆ ಇತರಾ ಮಾತನಾಡುವುದು ಇದು ಯಾವ ಧರ್ಮ ಎಂದು ಅವರು ಪ್ರಶ್ನಿಸಿದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial