
ಹಾವೇರಿ: ಮುಡಾ ವಿಚಾರದಲ್ಲಿ ರಾಜ್ಯಪಾಲರ ತಪ್ಪು ಮಾಡಿದ್ದಾರೆ,ಅದಕ್ಕಾಗಿ ಕಾನೂನು ಹೋರಾಟ ಆರಂಭವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಕಾನೂನು ಹೋರಾಟ ಪ್ರಾರಂಭವಾಗಿದೆ.
ರಾಜ್ಯಪಾಲರು ತಪ್ಪಿತಸ್ಥರೆಂದು ಈಗಾಗಲೇ ಮೇಲ್ನೋಟಕ್ಕೆ ಸಾಭಿತಾಗಿದೆ.ಕಾರಣ ಇಷ್ಟೇ ಇಂತಹ ಅನೇಕ ಪ್ರಕರಣಗಳು ಮಾನ್ಯ ಗವರ್ನರ್ ಮುಂದೆ ಬಿದ್ದಿವೆ.ಇದನ್ನೆ ಕೈಗೆತ್ತಿಕೊಳ್ಳುವ ಉದ್ದೇಶ ಏನಂದರೆ,ಬಿಜೆಪಿ ಅವರ ಉದ್ದೇಶ ಜನರಿಂದ ಆಯ್ಕೆಯಾದ ಸರ್ಕಾರವನ್ನ ಅಸ್ತಿರಗೊಳಿಸಿ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಉದ್ದೇಶ ಬಿಜೆಪಿಯದ್ದಾಗಿದೆ.
ಅದು ನಿರಂತರವಾಗಿ ನಡೆದಿದೆ. 2016ರಿಂದ ಹಲವು ಬಾರಿ ವಾಮ ಮಾರ್ಗದಲ್ಲಿ 7&8 ಬಾರಿ ಸರ್ಕಾರವನ್ನ ಕಿತ್ತಿಕ್ಕಿದ್ದಾರೆ. ಕರ್ನಾಟಕದಲ್ಲಿ ಕೂಡ ಸಫಲರಾಗುತ್ತೆವೆ ಅನ್ನುವ ಉದ್ದೇಶದಿಂದ ಬಿಜೆಪಿ ಅವರು ಮಾಡ್ತಿದ್ದಾರೆ.ಇದನ್ನ ವಿರೋಧಿಸಿ ಚುನಾಯಿತ ಪ್ರತಿನಿಧಿಗಳಾದ ನಾವು ಸಿದ್ದರಾಮಯ್ಯನವರ ಜೊತೆ ಇರ್ತಿವಿ.ವರಿಷ್ಟುರು ಕೂಡ ಅವರ ಜೊತೆ ಇದ್ದಾರೆ, ಯಾವುದೇ ಕಾರಣಕ್ಕೂ ಸಿದ್ಧ ರಾಮಯ್ಯನವರು ರಾಜೀನಾಮೆ ನೀಡುವ ಪ್ರಶ್ನೆ ಇಲ್ಲಾ.ಯಾವುದು ಸತ್ಯ ಯಾವುದು ಅಸತ್ಯ ಎಂಬುದು ಸತ್ಯಗೊತ್ತಾಗಲಿದೆ. ಕಾನೂನಿನ ಹೋರಾಟ ಮಾಡ್ತಿವಿ.
ಕೋರ್ಟಿಗೆ ವಿಚಾರ ಹೋಗಿದೆ ನಮ್ಮವರು ಗೌರ್ನರ್ ಏನ್ ತಪ್ಪ ಮಾಡಿದ್ದಾರೆಂದು ಸಾಭಿತ್ ಮಾಡ್ತಿದ್ದಾರೆ.