ಹಾವೇರಿ : ಕೇಂದ್ರ ಸರಕಾರ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಅಧಿಕಾರ ದುರ್ಬಳೆ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಬಿಜೆಪಿ – ಜೆಡಿಎಸ್ ಷಡ್ಯಂತರ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಅಹಿಂದ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಶಾಸಕ ಯು.ಬಿ.ಬಣಕಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸರಕಾರ ತಪ್ಪು ಮಾಡಿದ್ರೆ ಪ್ರತಿಭಟನೆ ಮಾಡುವ ಅಧಿಕಾರ ಇದೆ. ಆದ್ರೆ ಅದನ್ನು ಬಿಟ್ಟು ಸದನ ಕಲಾಪ ಹಾಳು ಮಾಡಿದ ಕೀರ್ತಿ ಬಿಜೆಪಿ – ಜೆಡಿಎಸ್ ಸಲ್ಲುತ್ತದೆ.ಸದನದಲ್ಲಿ ಎನೇ ಪ್ರಶ್ನೇ ಮಾಡಿದರು,ಸಿಎಂ ಅವರು ಸಮರ್ಪಕವಾಗಿ ಉತ್ತರ ನೀಡುತ್ತಿದ್ದರು.ಅದನ್ನು ಕೇಳುವ ಸೌಜನ್ಯ ಎರಡು ಪಕ್ಷಗಳಿಗೆ ಇಲ್ಲವಾಗಿದೆ ಎಂದು ಆರೋಪಿಸಿದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ನಾಡು ಕಂಡ ಪ್ರಮಾಣಿಕ ಆಡಳಿತಗಾರ.ಅಹಿಂದ ನಾಯಕನ ವಿರುದ್ಧ ಕೇಂದ್ರ ಸರ್ಕಾರ ಷಡ್ಯಂತರ ಮಾಡುತ್ತಿದೆ. ರಾಜ್ಯಪಾಲರ ಕೇಂದ್ರ ಸರಕಾರ ಅಧಿಕಾರ ದುರಪಯೋಗ ಮಾಡಿಕೊಳ್ಳುತ್ತಿದೆ. ಸಂವಿಧಾನಿಕ ಹುದ್ದೆಗೆ ಅಗೌರವ ತೋರುತ್ತಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ,ಸಿಎಂ ಸಿದ್ದರಾಮಯ್ಯನವರಿಗೆ
ಪ್ರಾಸಿಕ್ಯೂಷನ್ ನೋಟಿಸ್ ನೀಡಿದರೆ ಉಗ್ರ ಹೋರಾಟವಾಗುತ್ತೆ.ಮುಡಾ ವಿಚಾರದಲ್ಲಿ
ಸಿಎಂ ಸಿದ್ದರಾಮಯ್ಯನವರು ಹಾಗೂ ಕುಟುಂಬ ನಿಯಮ ಬಾಹೀರವಾಗಿ ನಿವೇಶನ ಪಡೆದುಕೊಂಡಿಲ್ಲ.ಬಿಜೆಪಿ ತನ್ನ ಸರ್ಕಾರದ ಅವಧಿಯಲ್ಲಿ ನಿವೇಶನ ಹಂಚಿಕೆ ಮಾಡಿದೆ. ಇದೀಗ ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತರ ರೂಪಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.ಕರ್ನಾಟಕದ ಜನತೆ ಸತ್ಯಕ್ಕೆ ಬೆಂಬಲಿಸುತ್ತಾರೆ.ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರ ಅಧಿಕಾರ ದುರುಪಯೋಗ ಮಾಡಿದಲ್ಲಿ ಅಹಿಂದ ವರ್ಗದ ಜನ ಸಿಡಿದೇಳುವುದು ನಿಶ್ಚಿತ ಎಂದರು.
ಪ್ರತಿಭಟನೆಯಲ್ಲಿ ಶಾಸಕ ಪ್ರಕಾಶ ಕೋಳಿವಾಡ,ಮಾಜಿ ಸಚಿವ ಆರ್.ಶಂಕರ್, ಶಾಸಕ ಅಜ್ಜಂಪೀರ್ ಖಾದ್ರಿ,ಮುಖಂಡರಾದ ಯಾಸೀರ್ ಖಾನ್ ಪಠಾಣ ಸೇರಿದಂತೆ ಸಾವಿರಾರು ಜನರು ಕಾರ್ಯಕರ್ತರು ಹಾಜರಿದ್ದರು.