ಹಾವೇರಿ: ಹಾವೇರಿ ಜಿಲ್ಲೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಶಿಗ್ಗಾವಿಯಲ್ಲಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಯಾಸೀರ್ ಖಾನ್ ಪಠಾಣ ಪ್ರತ್ಯೇಕವಾಗಿ ಸ್ವಾಗತಿಸಿದರು.
ಹುಬ್ಬಳ್ಳಿಯಿಂದ ರಾಣೇಬೆನ್ನೂರಿನ ದೇವರಗುಡ್ಡಕ್ಕೆ ತೆರಳುವ ವೇಳೆ ಶಿಗ್ಗಾವಿ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಸ್ವಾಗತಿಸಿದರು.ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಖಾದ್ರಿ ನೇತೃತ್ವದಲ್ಲಿ ಕಂಬಳಿ ಹಾಕಿ ಸಿಎಂಗೆ ಸ್ವಾಗತ ಮಾಡಲಾಯಿತು.
ಶಿಗ್ಗಾವಿಯಲ್ಲಿ ಪ್ರತ್ಯೇಕವಾಗಿ ಸಿಎಂ ಅವರನ್ನು ಸ್ವಾಗತಿಸಲಾಯಿತು.ಗರುಡ ಹೊಟೇಲ್ ಬಳಿ ಖಾದ್ರಿ ನೇತೃತ್ವದಲ್ಲಿ ಸ್ವಾಗತಿಸಿದರೆ,ಪ್ರವಾಸಿ ಮಂದಿರದ ಬಳಿ ಪಠಾಣ್ ಬೆಂಬಲಿಗರಿಂದ ಸ್ವಾಗತ ಮಾಡಲಾಯಿತು.ಶಿಗ್ಗಾವಿ ಉಪಚುನಾವಣೆ ಹಿನ್ನೆಲೆ ಟಿಕೆಟ್ ಗಾಗಿ ಬಡಿದಾಡುತ್ತಿರುವ ಪಠಾಣ ಹಾಗೂ ಖಾದ್ರಿ ಬಣಗಳು.ಎರಡು ಬಣಗಳಿಂದ ಸಿಎಂ ಗೆ ಪ್ರತ್ಯೇಕವಾಗಿ ಸ್ವಾಗತಿಸಿದರು.