ಹಾವೇರಿ: ಖಾಸಗಿ ವಾಹಿನಿಯ ಅವಾರ್ಡ್ ಕಾರ್ಯಕ್ರಮದಲ್ಲಿ ಹಾಸ್ಯನಟನೊಬ್ಬ ಭೋವಿ ಸಮಾಜದ ಕುರಿತು ಅವಹೇಳನಕಾರಿ ಪದ ಬಳಕೆ ಮಾಡಿರುವ ಹಿನ್ನೆಲೆ ಕರ್ನಾಟಕ ಭೋವಿ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಗೌತಮ್ ವೆಂಕಿ ಅವರು ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಆನೆಕಲ್ ಪೊಲೀಸ್ ಠಾಣೆಗೆ ತೆರಳಿದ ಗೌತಮ್ ಅವರು ಹಾಸ್ಯನಟ ಹಾಗೂ ಚಾನಲ್ ಮುಖ್ಯಸ್ಥರು ವಿರುದ್ಧ ದೂರು ನೀಡಿದ್ದಾರೆ. ಖಾಸಗಿ ಚಾನಲ್‌ನಲ್ಲಿ ದಿ.22-09-2024ರಂದು ಸಂಜೆ 07.00 ಗಂಟೆಗೆ ಪ್ರಸಾರವಾದ ಅವಾರ್ಡ್ ಕಾರ್ಯಕ್ರಮದಲ್ಲಿ ಹಾಸ್ಯನಟ ಹುಲಿ ಕಾರ್ತಿಕ್ ಎಂಬುವರು, ಯಾವುದೋ ರೋಡ್‌ನಲ್ಲಿ ಬಿದ್ದಿರುವ ವಡ್ಡಾ ಇದ್ದಾಂಗೆ ಇದಾನೆಂದು ನಮ್ಮ ಭೋವಿ ಸಮೂದಾಯಕ್ಕೆ ಅವಮಾನ ಮಾಡಿದ್ದಾರೆ. ಮತ್ತು ಇದನ್ನು ಪ್ರಸಾರ ಮಾಡಿದ ವಾಹಿನಿಯ ಮಾಲೀಕರು ಮತ್ತು ಮುಖ್ಯ ಎಡಿಟರ್‌ಗಳ ವಿರುದ್ಧ SC/ST ಕಾಯ್ದೆಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಚಾನಲ್‌ನಲ್ಲಿ ಪದೇ ಪದೇ ನಮ್ಮ ಸಮೂದಾಯಕ್ಕೆ ಅವಮಾನ ಮಾಡುತ್ತಿರುವ ಜಾತಿ ಅರಿವುಯಿಲ್ಲದೆ ರಿಯಾಲಿಟ್ ಶೋ ಗಳಲ್ಲಿ ಜಾತಿಗಳಿಗೆ ಅವಮಾನ ಮಾಡಿರುವ ರೀತಿಯಲ್ಲಿ ಮಾಲೀಕರು ಮತ್ತು ಮುಖ್ಯ ಎಡಿಯರ್‌ಗಳಿಂದ ಭೋವಿ ಸಮೂದಯಕ್ಕೆ ನ್ಯಾಯಾ ಒದಗಿಸಿ ಕೋಡಬೆಕೆಂದು ದೂರಿನಲ್ಲಿ ತಿಳಿಸಲಾಗಿದೆ.