ಹಾನಗಲ್ಲ: ಸಾಮಾಜಿಕ ಸೇವೆಯಿಂದ ಜೀವನದಲ್ಲಿ ತೃಪ್ತಿ ಸಿಗಲು ಸಾಧ್ಯ. ಸದಾ ಜನರೊಂದಿಗೆ ಬೆರೆಯುವ ಮೂಲಕ ಬದುಕು ಅರ್ಥಪೂರ್ಣವಾಗಿ ಸಿಕೊಳ್ಳುತ್ತೇನೆಂದು ಸಮಾಜ ಸೇವಕರಾದ ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಜಶೇಖರಗೌಡ ಕಟ್ಟೇಗೌಡರ ಹೇಳಿದರು.
ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಶ್ರೀ ಅಂಬಿಗರ ಚೌಡಯ್ಯ ಯುವಕ ಮಂಡಲ ವತಿಯಿಂದ ಆಯೋಜಿಸಿದ್ದ ಹೊಂಡಕ್ಕೆ ಮೀನು ಬಿಡುವ ಕಾರ್ಯಕ್ರಮಕ್ಕೆ ಮೀನು ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದಲ್ಲಿ ಎಲ್ಲರೂ ಸೇರಿ ಸಹಕಾರ ಭಾವನೆಯಿಂದ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡಿದರೆ ಎಂತಹ ಅಸಾಧ್ಯ ಕೆಲಸವನ್ನಾದರೂ ಮಾಡಲು ಸಾಧ್ಯ ಎಂದು ಹೇಳಿದರು.
ಇದಕ್ಕೂ ಮೊದಲು ಹೊಂಡಕ್ಕೆ ಪೂಜೆ ಸಲ್ಲಿಸಿ ನಂತರ ಹೊಂಡಕ್ಕೆ ಮೀನು ಬಿಡುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯರು ಯುವಕ ಮಂಡಲ ವತಿಯಿಂದ ರಾಜಶೇಖರಗೌಡ ಕಟ್ಟೇಗೌಡರ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಅಂಬಿಗರ ಚೌಡಯ್ಯ ಯುವಕ ಮಂಡಲದ ಅಧ್ಯಕ್ಷ ಅನಿಲಕುಮಾರ ಜಾಡರ, ಸದಸ್ಯರಾದ ಮಂಜು ಮಾಳಗಿ, ಹೊನ್ನಪ್ಪ ಮಾಳಗಿ, ರಮೇಶ ಜಾಡರ, ಸುರೇಶ ಅಡಿವೆಣ್ಣನವರ, ಪುಟ್ಟೇಶ ಜಾಡರ, ದುಂಡಪ್ಪ ಗಂಜಿಗಟ್ಟಿ, ಪ್ರಕಾಶ ಕೊಳೂರ, ಮಾಲತೇಶ ಸುಂಕದ, ರವಿ ಕೂಡಲ, ಪುಟ್ಟಪ್ಪ ಗುಳಮ್ಮನವರ, ಅಶೋಕ ಜುಗಮ್ಮನವರ, ಮಾರುತಿ ಸಂಶಿ, ಈರಪ್ಪ ಸೂಲಿ, ಸಹದೇವಪ್ಪ ಸಂಶಿ, ಬಸವಣ್ಣೆಪ್ಪ ಸಂಶಿ ಸೇರಿದಂತೆ ಗ್ರಾ.ಪಂ.ಸದಸ್ಯರು, ಮುಖಂಡರು, ಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.