ಹಾನಗಲ್ಲ : ಹಾನಗಲ್ಲ ಪುರಸಭೆ ಕೊಟ್ಟಿ ಇ-ಸ್ವತ್ತು ಉತಾರ ರದ್ದತಿಗೆ ಆಗ್ರಹಿಸಿ ಪಟ್ಟಣದ ಗ್ರಾಮದೇವಿ
ಸದ್ಭಕ್ತರ ಸಮಿತಿ ಹಾನಗಲ್ಲಿನ ಗ್ರಾಮದೇವಿ ಪಾದಗಟ್ಟಿಯಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೈಕ್ ರಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಡೆದರು.
ಶನಿವಾರ ಬೈಕ್‌ಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹಾನಗಲ್ಲ ಗ್ರಾಮದೇವಿ
ಪಾದಗಟ್ಟಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಕ್ಕಿ ಅಲೂರು, ಬಾಳಂಬೀಡ, ಆಡೂರು
ಮಾರ್ಗವಾಗಿ ಹಾವೇರಿಗೆ ನಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಪ್ರಶಾಂತ ಮುಚ್ಚಂಡಿ, ಕೊಟ್ಟಿ
ಉತಾರ ಹಾಗೂ ಈ ಸ್ವತ್ತು ಮಾಡಿ ಕೊಟ್ಟಿ ಹಾನಗಲ್ಲ ಪುರಸಭೆ ಸರಕಾರಿ ಆಸ್ತಿಯನ್ನು ಪರರ ಪಾಲು
ಮಾಡಿದೆ. ಇದೇ ಜಾಗದಲ್ಲಿ ಕಾನೂನು ಬಾಹೀರ ಕಟ್ಟಡ ಪರವಾನಿಗಿ ನೀಡುತ್ತಿದೆ. ಆಕ್ರಮ ಕಟ್ಟಡಕ್ಕೆ
ಅವಕಾಶ ನೀಡುತ್ತಿದೆ. ಸರಕಾರಿ ಆಸ್ತಿಯನ್ನು ರಕ್ಷಿಸುವ ಬದಲು ಹಾನಗಲ್ಲ ಪುರಸಭೆ ಆಸ್ತಿಯನ್ನು ಪರರ
ಪಾಲು ಮಾಡುತ್ತಿದೆ. ಈ ಬಗ್ಗೆ ಹಲವು ಹೋರಾಟಗಳು ನಡೆದರೂ ಈ ಬಗ್ಗೆ ಲಕ್ಷ್ಯ ವಹಿಸದ ಪುರಸಭೆ
ಮುಖ್ಯಾಧಿಕಾರಿ ನಡೆ ವಿರೋಧಿಸಿ ಹಾಗೂ ಕೂಡಲೇ ಈಗಾಗಲೇ ನೀಡಿರುವ ಕೊಟ್ಟಿ ದಾಖಲೆಗಳನ್ನು
ರದ್ದುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಕೊಟ್ಟಿ ದಾಖಲೆ ನೀಡಿದ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸಲಾಗದ
ಜಿಲ್ಲಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು
ನೀಡಿದ ಹತ್ತು ದಿನಗಳ ಗಡುವು ಈಗ ಮುಗಿದಿದೆ. ಮತ್ತೆ ಇದನ್ನೇ ಎಚ್ಚರಿಸಲು ಜಿಲ್ಲಾಧಿಕಾರಿಗಳಿಗೆ
ಮನವಿ ಸಲ್ಲಿಸಲಾಗುತ್ತಿದೆ. ಅಲ್ಲದೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟಕ್ಕೆ
ನಾವು ಬದ್ಧ ಎಂದು ಪ್ರಶಾಂತ ಮುಚ್ಚಂಡಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರ ಕಟ್ಟೇಗೌಡರ, ನಿಂಗಪ್ಪ ಗೊಬ್ಬೇರ,
ಕಲ್ಯಾಣಕುಮಾರ ಶೆಟ್ಟರ, ಗಣೇಶ ಮೂಡ್ಲಿಯವರ, ರವಿ ಪುರೋಹಿತ, ಬಸವರಾಜ ಮಟ್ಟಿಮನಿ,
ಸಂಜಯ ಬೇಂದ್ರೆ , ಬಸವರಾಜ ಹಾದಿಮನಿ, ರಾಮು ಯಳ್ಳೂರು ಪ್ರವೀಣ ಸುಲಾಖೆ, ಈಶ್ವರ ನಿಂಗೋಜಿ, ಮೊದಲಾದವರು
ಇದ್ದರು.