ಹಾನಗಲ್: ಗಣೇಶ್ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಹಾನಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಪರೇಡ ನಡೆಸಲಾಯಿತು.
ಒಂದು ವೇಳೆ ಗಣೇಶ್ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತವಾಗಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಮುಲಾಜಿಲ್ಲದೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಆದ ಆಂಜನೇಯ ಎನ್ಎಚ್ ಎಚ್ಚರಿಕೆ ನೀಡಿದ್ದರು.
ಎಲ್ಲರಂತೆ ಬದುಕು ನಡೆಸುವುದನ್ನು ಬಿಟ್ಟು ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡಿದ್ರೆ ಕಥೆ ಮುಗಿಯಿತು ನಿಮ್ಮನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ ಎಂದು ಅವಾಜ್ ಕೂಡ ಹಾಕಿದರು.
ನೀವು ಸಮಾಜದಲ್ಲಿ ಉತ್ತಮರಾಗಿ ಜೀವನ ನಡೆಸಿದರೆ ಸರಿ, ಇಲ್ಲದಿದ್ದರೆ ನಿಮ್ಮ ಜೀವನದಲ್ಲಿ ನಾವು ಎಂಟ್ರಿ ಕೊಡ್ತೀವಿ ನೀವು ಚೆನ್ನಾಗಿ ಜೀವನ ನಡೆಸುತ್ತೀವಿ ಅನ್ನೋದಾದ್ರೆ ನಾವೇ ನಿಮ್ಮ ರೌಡಿಶೀಟು ತೆಗೆದು ಹಾಕುತ್ತೇವೆ. ಬಾಲ ಬಿಚ್ಚಿದರೆ ನಮ್ಮ ಸ್ಟೈಲ್ ಅಲ್ಲಿ ಉತ್ತರ ಕೊಡ್ತೀವಿ ಎಂದು ರೌಡಿಗಳಿಗೆ ಸಬ್ ಇನ್ಸ್ಪೆಕ್ಟರ್ ಸಂಪತ್ ಆನಿ ಕಿವಿಯವರು ತಿಳಿಸಿದರು.
ಸಾರ್ವಜನಿಕರ ಶಾಂತಿ ನೆಮ್ಮದಿ ಮತ್ತು ಕಾನೂನು ಸೂವಸ್ಥೆ ಹಾಳು ಮಾಡುವಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟು ನಿಟಿನ ಎಚ್ಚರಿಕೆ ನೀಡಿದರು ಒಂದು ವೇಳೆ ಅಂತ ಚಟುವಟಿಕೆಗಳಲ್ಲಿ ತೊಡಗಿದ್ದರೆ ಬಗ್ಗೆ ಪೊಲೀಸರಿಗೆ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ವಾರ್ನ್ ಮಾಡಿದರು.