ಹಾನಗಲ್ : ಸ್ಥಳೀಯ ಪುರಸಭೆ ಎರಡನೇ ಅವಧಿಗೂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯರಾದ ಮಮತಾ ಅಶೋಕ್ ಆರೆಗೋಪ್ಪಾ ಉಪಾಧ್ಯಕ್ಷರಾಗಿ ವೀಣಾ ರಾಜು ಗುಡಿ ಅವಿರೋಧವಾಗಿ ಆಯ್ಕೆಗೊಂಡರು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಏರ್ಪಡಿಸಲಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಮಮತಾ ಅಶೋಕ್ ಆರೆಗೊಪ್ಪ ಉಪಾಧ್ಯಕ್ಷ ಸ್ಥಾನಕ್ಕೆ 3 ವಾರ್ಡಿನ ವೀಣಾ ರಾಜು ಗುಡಿ ನಾಮಪತ್ರ ಸಲ್ಲಿಸಿದರು
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾ ಅಧಿಕಾರಿ ತಹಶೀಲ್ದಾರ್ ಎಸ್ ರೇಣುಕಮ್ಮ ಅಧ್ಯಕ್ಷರಾಗಿ ಮಮತಾ ಅಶೋಕ್ ಆರೆಗೋಪ್ಪ ಉಪಾಧ್ಯಕ್ಷರಾಗಿ ವೀಣಾ ರಾಜು ಗುಡಿ ಆಯ್ಕೆಗೊಳಿಸಲಾಗಿದೆ ಎಂದು ಘೋಷಿಸಿದರು.
ಕಾಂಗ್ರೆಸ್ ತೆಕ್ಕೆಗೆ ಹಾನಗಲ್ ಪುರಸಭೆ
ಒಟ್ಟು ಸದಸ್ಯರು 23 ನೂತನ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ ಖುರ್ಶಿದ್ ಅಹ್ಮದ್ ಉಲ್ಲತಿ ಪರಶುರಾಮ್ ಖಂಡುನವರ ಸೈಯದ್ ಅಹಮದ್ ಭಾಷಾ ಪಿರ್ಜಾದೆ ನಾಗಪ್ಪ ಸೌದತ್ತಿ ವಿರುಪಾಕ್ಷಪ್ಪ ಕಡಬಗೆರಿ ಪ್ರಕಾಶ್ ತಳವಾರ್ ಗಂಗೂಬಾಯಿ ನಿಂಗೂಜಿ ನಾಶಿರಾ ಬಡಗಿ ರಶೀದಾ ಬಾನು ನಾಯಕನವರ್ ಶಂಶೀಯಾ ಬಾನು ಬಾಳೂರು ರಾಧಿಕಾ ದೇಶಪಾಂಡೆ ಶೋಭಾ ಹೊಂಬಳಿ ಸುನಿತಾ ಭದ್ರಾವತಿ ಸೇರಿದಂತೆ 13 ಸದಸ್ಯರು ಮಾತ್ರ ಹಾಜರಿದ್ದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾವಣಾ ಅಧಿಕಾರಿ ಎಸ್ ರೇಣುಕಮ್ಮ ಮುಖ್ಯಾಧಿಕಾರಿ ಜಗದೀಶ್ ವೈ.ಕೆ. ಹೂಗುಚ್ಛ ನೀಡಿ ಅಭಿನಂದಿಸಿದರು.