ಹಾನಗಲ್ : ಅವಿರೋಧವಾಗಿ ಆಯ್ಕೆಯಾಗಿರುವ ಹಾನಗಲ್ ಪುರಸಭೆಯ ನೂತನ ಅಧ್ಯಕ್ಷರಾದ ಮಮತಾ ತಮ್ಮಣ್ಣ ಆರೆಗೊಪ್ಪ, ಉಪಾಧ್ಯಕ್ಷರಾದ ವೀಣಾ ರಾಜೂ ಗುಡಿ ಅವರಿಗೆ ಶಾಸಕರಾದ ಮಾನೆ ಶ್ರೀನಿವಾಸ ಅಭಿನಂದಿಸಿದರು.
ರಸ್ತೆ, ಗಟಾರ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಲಿದೆ. ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ ನಿರ್ವಹಣೆಗೆ ಸ್ಥಳೀಯವಾಗಿ ಸಂಗ್ರಹಿಸುವ ಸಂಪನ್ಮೂಲ ಬಳಸಬೇಕಿದೆ. ಜವಾಬ್ದಾರಿ ಅರಿತು, ಸದಸ್ಯರ ಸಹಕಾರ ಪಡೆದು ಕಳಕಳಿಯಿಂದ ಕೆಲಸ ನಿರ್ವಹಿಸಿ. ಒಳ್ಳೆಯ ಆಡಳಿತ ನೀಡಿ ಪಕ್ಷಕ್ಕೂ ಹೆಸರು ತರಬೇಕು. ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಂದ ಆಗಲಿ ಎಂದು ಇದೇ ಸಂದರ್ಭದಲ್ಲಿ ಮಾನೆ ಶ್ರೀನಿವಾಸ ಅವರು ಹೇಳಿದರು.