
ಹಾನಗಲ್: ಶಾಸಕ ಮಾನೆ ಶ್ರೀನಿವಾಸ ಅವರ 50 ನೇ ಜನ್ಮದಿನದ ಅಂಗವಾಗಿ ಹಾನಗಲ್ ತಾಲೂಕಿನ 85 ಸರ್ಕಾರಿ ಮತ್ತು ವಸತಿ ಶಾಲೆಗಳಲ್ಲಿ ಏಕಕಾಲಕ್ಕೆ 5 ಸಾವಿರ ಸಸಿ ನೆಡುವ ಮೂಲಕ ಮಾನೆ ಅಭಿಮಾನಿಗಳು ಅರ್ಥಪೂರ್ಣವಾಗಿ ಶಾಸಕರ ಹುಟ್ಟು ಹಬ್ಬ ಆಚರಣೆ ಮಾಡಿದರು. ಹಾನಗಲ್ ನಗರ ಸೇರಿದಂತೆ ಎಲ್ಲ 6. ಜಿಪಂ ಕ್ಷೇತ್ರ ವ್ಯಾಪ್ತಿಗಳ ಶಾಲೆಗಳ ಮೈದಾನಗಳಲ್ಲಿ ಸಸಿ ನೆಡಲಾಯಿತು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ವರ್ಷವಿಡೀ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ ಶಾಸಕ ಮಾನೆ ಅವರು ಅಭಿಮಾನಿಗಳು ತಿಳಿಸಿದ್ದಾರೆ.