
ಹಾವೇರಿ: ಗ್ರಾಮ ಪಂಚಾಯತಿಯಲ್ಲಿ ಚರಂಡಿ ಸ್ವಚ್ಚಗೊಳಿಸಲಾಗಿದೆ ಎಂದು ಲಕ್ಷ ಲಕ್ಷ ಹಣ ಡ್ರಾ ಮಾಡಲಾಗಿರುವುದು ಬೆಳಕಿಗೆ ಬಂದಿದೆ.
ಸವಣೂರು ತಾಲೂಕಿನ ಹೆಸರೂರು ಗ್ರಾಮ ಪಂಚಾಯತಿಯಲ್ಲಿ ಈ ಒಂದು ಪ್ರಕರಣ ಬೆಳಕಿದೆ.ಈಗಾಗಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಹಣವನ್ನು ಡ್ರಾ ಮಾಡಿಕೊಂಡಿರುವುದು ದಾಖಲೆಯಲ್ಲಿ ಕಂಡು ಬಂದಿದೆ.ಆದರೆ,ವಾಸ್ತವದಲ್ಲಿ ಗ್ರಾಮದಲ್ಲಿ ಚರಂಡಿಗಳು ಕೊಳಚೆಯಿಂದ ತುಂಬಿ ಕೊಳಕು ನಾರುತ್ತಿವೆ.ಮಳೆಗಾಲದಲ್ಲಿ ಗ್ರಾಮದ ಚರಂಡಿಗಳು ತ್ಯಾಜ್ಯದಿಂದ ತುಂಬಿ ಗುಂಡಿಯಲ್ಲಿ ಕೊಳಚೆ ನೀರು ತುಂಬಿದೆ. ಇದೇ ಗುಂಡಿಯಲ್ಲಿ ಸೊಳ್ಳೆಗಳ ಉತ್ಪತಿಯಾಗುತ್ತಿವೆ.
ಹೆಸರೂರ ಗ್ರಾಮದಲ್ಲಿ ಚರಂಡಿ ಸ್ವಚ್ಚತಾ ನೈರ್ಮೊಲ್ಯ ನಿರ್ಮಲೀಕರಣ ಯೋಜನೆಯಡಿಯಲ್ಲಿ ಸದರಿ ಗ್ರಾಮದಲ್ಲಿ ಅರ್ಧ ಚರಂಡಿ ಸ್ವಚ್ಚತಾ ಮಾಡಿ, ಇನ್ನೂ ಅರ್ಧ ಹಾಗೇ ಬಿಟ್ಟಿದ್ದಾರೆ. ಆದರೆ, ಪೂರ್ತಿ ಕೆಲಸ ಮಾಡಿರುತ್ತೇವೆಂದು ಬಿಲ್ಲನ್ನು ಹಣವನ್ನು ತೆಗೆದುಕೊಂಡಿರುತ್ತಾರೆ. ಆದರೆ ಗ್ರಾಮದ ನವನಗರದ ಓಣಿಯಲ್ಲಿ ಕಾಲುವೆ-ಗಟ್ಟಾರ ತುಂಬಿ ಹೋಗಿದೆ.