ಬಿಜೆಪಿ ಅಂದ್ರೆ ಸಾಕು ನಿಗಿ ನಿಗಿ ಕೆಂಡಕಾರ್ತಾರೆ ಸಿದ್ದರಾಮಯ್ಯ..ಕೋಮುವಾದಿ ಪಕ್ಷ ಬಿಜೆಪಿ ಅಂತ ನಖಶಿಖಾಂತ ಉರಿದುಕೊಳ್ತಾರೆ..ಚ್ಯಾನ್ಸ್ ಸಿಕ್ಕಾಗಲೆಲ್ಲಾ , ಬಿಜೆಪಿ ನಾಯಕರ ವಿರುದ್ಧ ಸರಣಿ ವಾಗ್ದಾಳಿಯನ್ನೇ ನಡೆಸ್ತಿರ್ತಾರೆ
ಆದ್ರೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಸಿದ್ದರಾಮಯ್ಯ ಕುರಿತು ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ..ಯಾವ ಬಿಜೆಪಿ ಅಂದ್ರೆ ಕೋಮು ಸಂಘರ್ಷದ ಪಕ್ಷ ಅಂತ ಆರೋಪಗಳ ಮೇಲೆ ಆರೋಪ ಮಾಡ್ತಿದ್ರೋ, ಈಗ ಅದೇ ಬಿಜೆಪಿ ಪಕ್ಷದ ಜೊತೆ ಸಿದ್ದರಾಮಯ್ಯ ಕೈ ಜೋಡಿಸೋದಕ್ಕೆ ಹೊರಟಿದ್ರು ಅನ್ನೊ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ..ಬಾಯಿ ತೆಗೆದ್ರೆ ತಾನು ಅಹಿಂದ ನಾಯಕ..ಜಾತ್ಯಾತೀತ ನಾಯಕ ಅಂತ ಹೇಳ್ತಿದ್ದ ಸಿದ್ದರಾಮಯ್ಯ, ಸಿದ್ಧಾಂತಗಳನ್ನು ತೂರಿ, ಕಮಲ ಪಾಳಯದ ಕದ ತಟ್ಟಿದ್ರು ಅಂತ ಘಟಾನುಘಟಿ ನಾಯಕರೇ ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ನಮಗಿಂತಲೂ ಮೊದಲೇ ಬಿಜೆಪಿಯ ಬಾಗಿಲು ಬಡಿದಿರಲಿಲ್ವಾ ಅಂತ ಕುಮಾರಸ್ವಾಮಿ ಪ್ರಶ್ನಿಸಿದ್ದು, ಈ ಬಗ್ಗೆ ಬಾಯಿ ಬಿಡಲಿ ಅಂತ ಹೇಳಿದ್ದಾರೆ..ಸಿದ್ದರಾಮಯ್ಯ ಬಿಜೆಪಿ ಸೇರುವುದಕ್ಕಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವ್ರ ಮನೆಗೆ ಹೋಗಿದ್ದ ಬಗ್ಗೆ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ..ಯಾರನ್ನು ಕರೆದುಕೊಂಡು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಹೋಗಿದ್ದರು ಅನ್ನೋದನ್ನು ಹೇಳಲಿ ಅಂತ ಹೇಳಿದ್ರು..ಇನ್ನು ಮುಂದುವರೆದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನಮ್ಮ ನೈತಿಕತೆ ಬಗ್ಗೆ ಮಾತನಾಡ್ತೀರಿ.
ನಮ್ಮ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡ್ತೀರಾ, ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು , ಸಂಸತ್ತಿಗೆ ಹೋಗದಿದ್ರೆ ನೀವು ಬಿಜೆಪಿ ಸೇರ್ತಾ ಇರ್ಲಿಲ್ವಾ? ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಬಿಜೆಪಿ ಸೇರೋದಕ್ಕೆ ಮುಂದಾಗಿದ್ದು ಗೊತ್ತಿದೆ ಅಂತ ಹೆಚ್ಡಿಕೆ ಹೇಳಿಕೆ ನೀಡಿದ್ದೇ, ನೀಡಿದ್ದು,ರಾಜ್ಯ ರಾಜಕೀಯದಲ್ಲಿ ಕಂಪನ ಸೃಷ್ಟಿಯಾಗಿದೆ..ದೊಡ್ಡ ಮಟ್ಟದ ಹಲ್ಚಲ್ ಎಬ್ಬಿಸಿದೆ..ಕೇವಲ ಕುಮಾರಸ್ವಾಮಿ ಮಾತ್ರ ಅಲ್ಲ, ಜೆಡಿಎಸ್ನ ಮತ್ತೊಬ್ಬ ನಾಯಕ ಜಿ.ಟಿ.ದೇವೇಗೌಡ ಕೂಡ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ..೨೦೦೮ ರಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿತ್ತು.
ತಮಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿರಲಿಲ್ಲ ಅಂತ ಸಿದ್ದರಾಮಯ್ಯ , ಅಡ್ವಾಣಿ ಮನೆಯಲ್ಲಿ ಬ್ರೇಕ್ಫಾಸ್ಟ್ ಮಾಡಿದ್ರು..ಇದಕ್ಕೆ ಬಹಳಷ್ಟು ಜನ ಸಾಕ್ಷಿ ಇದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ..ಅಷ್ಟೇ ಅಲ್ಲ, ಸಿದ್ದರಾಮಯ್ಯ ಮೊದಲು ಡಿಸಿಎಂ ಆಗಿದ್ದು, ಜೆಡಿಎಸ್ ಪಕ್ಷದಿಂದ ಅಂತ ಮರೆಯಬಾರದು..ಡಿಸಿಎಂ ಆಗಿ ಅಹಿಂದ ಮಾಡಲು ಹೋದ್ರು, ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೋದ್ರು..ಡಿಸಿಎಂ ಆಗಿದ್ದ ಸಿದ್ದು, ಮುಖ್ಯಮಂತ್ರಿ ಆಗಲು ದೆಹಲಿ ಅಹಮದ್ ಪಟೇಲ್ ಜೊತೆ ಕೈ ಜೋಡಿಸಿದ್ದರು ಅಂತ ಸಿದ್ದುಗೆ ಕುಟುಕಿದ್ರು.. ಆದ್ರೆ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಅಂತ ಹರಿಹಾಯ್ದಿದ್ದಾರೆ.
ಇನ್ನು ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಕಾಂಗ್ರೆಸ್ ಮಾತ್ರ ಅಲ್ಲ, ಎಸ್ಪಿ, ಬಿಎಸ್ಪಿ ಜೊತೆಗೂ ಕೂಡ ಮಾತುಕತೆ ನಡೆಸಿದ್ರು ಅಂತ ಹೇಳಿಕೆ ನೀಡಿದ್ದಾರೆ..ಯಾವಾಗಿಂದ ರಾಜಕೀಯ ವಲಯದಲ್ಲಿ ಈ ಸುದ್ದಿ ಹರಿದಾಡ್ತಿದೆಯೋ , ಸಿದ್ದರಾಮಯ್ಯ ಅಧಿಕಾರಕ್ಕಾಗಿ ಏನಾದ್ರೂ ಮಾಡ್ತಾರೆ..ಹಠ ಹಿಡಿದು ಕೂರುತ್ತಾರೆ ಅಂತ ಅವ್ರನ್ನು ಹತ್ತಿರದಿಂದ ಬಲ್ಲವರು ಮಾತನಾಡಿಕೊಳ್ತಿದ್ದಾರೆ..ಸಿಎಂ ಪೋಸ್ಟ್ ಸಿಕ್ಕಿಲ್ಲ ಅಂತ ಜೆಡಿಎಸ್ ನಿಂದ ಹೊರಬಂದ್ರು..ಬಾಯಲ್ಲಿ ಅಹಿಂದ ಅಂತ ಮಂತ್ರ ಪಠಿಸ್ತಾರೆ..ಆದ್ರೆ ಅವರಿಗೆ ಅಧಿಕಾರದ ದಾಹ ಅಂತ ಮಾತನಾಡಿಕೊಳ್ತಿದ್ದಾರೆ.
ಅದೇ ರೀತಿ ತಮಗೆ ಅಧಿಕಾರ ಬೇಕು ಅನ್ನೋ ಕಾರಣಕ್ಕೆ ಬಿಜೆಪಿ ತತ್ವ, ಸಿದ್ಧಾಂತದ ತದ್ವಿರುದ್ಧ ಅವ್ರಿದ್ರೂ ಕೂಡ ಬಿಜೆಪಿ ಜೊತೆಗೆ ಹಸ್ತಲಾಘವ ಮಾಡೋದಕ್ಕೆ ಹೋಗಿದ್ರು..ಸಿದ್ದರಾಮಯ್ಯಗೆ ಬೇಕಾಗಿರೋದು ಪವರ್..ಪವರ್..ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಓಡಾಡ್ತಿವೆ