
ಹಾವೇರಿ: ಶಿಗ್ಗಾಂವ ತಾಲೂಕು ಚಂದಾಪೂರ ಗ್ರಾಮದ ಮಾನಿಕೆರೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಶುಕ್ರವಾರ ಭೇಟಿ ನೀಡಿ. ಕೆರೆ ಒಡ್ಡು ಒಡೆದಿರುವುದನ್ನು ಪರಿಶೀಲಿಸಿದರು.

ಚಂದಾಪುರ ಗ್ರಾಮದ ಸರ್ವೇ ನಂಬರ್ 142 ಮತ್ತು 143 ಕ್ಷೇತ್ರದ 12 ಎಕರೆ 35 ಗುಂಟೆ ಕೆರೆ | ಸತತ ಮಳೆಯಿಂದ ಕೆರೆಯ ಒಡ್ಡು ಒಡೆದು ಹೋಗಿದ್ದು, ಸ್ಥಳ ಪರಿಶೀಲನೆ ಮಾಡಿ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ್, ಶಿಗ್ಗಾಂವ ತಹಶೀಲ್ದಾರ ಸಂತೋಷ | ಹಿರೇಮಠ ಹಾಗೂ ವಿವಿಧ ಇಲಾಖೆಗಳು ಹಾಜರಿದ್ದರು.