![](https://livekarnataka.com/wp-content/uploads/2024/08/IMG-20240806-WA0032-780x470.jpg)
ಹಾನಗಲ್: ಹಾನಗಲ್ ತಾಲೂಕಾಸ್ಪತ್ರೆಯಲ್ಲಿ ಶಾಸಕ ಮಾನೆ ಶ್ರೀನಿವಾಸ ಅವರ 50 ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 108 ಜನ ರಕ್ತದಾನ ಮಾಡಿದರು.
![](https://livekarnataka.com/wp-content/uploads/2024/08/1000635662-1024x768.jpg)
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಆಶ್ರಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧೆಡೆ ನಡೆದ ರಕ್ತದಾನ ಶಿಬಿರಗಳಲ್ಲಿ ಅತೀ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಿದ ಶಿಬಿರ ಎನ್ನುವ ಹಿರಿಮೆಗೆ ಇಂದಿನ ರಕ್ತದಾನ ಶಿಬಿರ ಪಾತ್ರವಾಯಿತು. ಆ ಮೂಲಕ ಅಭಿಮಾನಿಗಳು, ಕಾರ್ಯಕರ್ತರು ನೆಚ್ಚಿನ ನೇತಾರನ ಅರ್ಥಪೂರ್ಣ ಜನ್ಮದಿನ ಆಚರಿಸಿದರು.ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.