Bengaluru CityChitradurgaDistrictLatestPoliticsState
ಸಿಎಂ ಸಿದ್ದರಾಮಯ್ಯ ಅವರ ವಂಶಸ್ಥರಿಂದ ಮತಾಂತರ ನಡೆಯುತ್ತಿದೆ: ಬಿಜೆಪಿ ಶಾಸಕ ತೆಂಗಿನಕಾಯಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಂಶಸ್ಥರಿಂದ ಮತಾಂತರ ನಡೆಯುತ್ತಿದೆ. ಅವರ ಸಮುದಾಯಕ್ಕೆ ಸೇರಿದವರಿದ ಮತಾಂತರ ನಡೆಯುತ್ತಿದ್ದು, ಸಿದ್ದರಾಮಯ್ಯ ಇನ್ನಾದರೂ ಕಣ್ಣು ತೆರೆಯಲಿ ಎಂದು ಬಿಜೆಪಿ ಶಾಸಕ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಿಡಿಕಾರಿದ್ದಾರೆ. ಚಿತ್ರದುರ್ಗದಲ್ಲಿ ಹಿಂದೂ ಧರ್ಮದ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರ ವಿಚಾರ ಸಂಬಂಧ ಮಾತನಾಡಿದ ಅವರು, ಬಿಜೆಪಿ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಹಿಂಧೂ ಮತಾಂತರ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ಮಾಡಿದ್ದೆವು. ಆದ್ರೆ ಕಾಂಗ್ರೆಸ್ ಸರ್ಕಾರ ಅದನ್ನು ತೆಗೆದುಹಾಕುವುದಾಗಿ ಹೇಳುತ್ತಿದೆ. ಅದರ ಭಾಗವಾಗಿ ಚಿತ್ರದುರ್ಗದಲ್ಲಿ ಮತಾಂತರ ನಡೆದಿದೆ ಎಂದು ದೂರಿದ್ದಾರೆ.
ಚಿತ್ರದುರ್ಗದ ಮತಾಂತರ ಘಟನೆ ಅತ್ಯಂತ ದುಃಖಕರ ಘಟನೆ. ಇಸ್ಲಾಮಿಕ್ ಮೂಲಭೂತವಾದಿಗಳಿಂದ ಯುವಕರ ಮತಾಂತರ ಆಗುತ್ತಿದೆ. ಮತಾಂತರ ಮಾಡಿದವರನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಟೆಂಗಿನಕಾಯಿ ಆಗ್ರಹಿಸಿದ್ದಾರೆ.